ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಮಧುಮೇಹ ಮತ್ತು ರಕ್ತಗುಂಪು ವರ್ಗೀಕರಣ ಶಿಬಿರ

0
138
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಗಂಗೊಳ್ಳಿ : ಇಂದಿನ ದಿನಗಳಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಸಂಪಾದನೆಗೋಸ್ಕರ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೆಟ್ಟು ಹೋದ ಆರೋಗ್ಯವನ್ನು ಸರಿಪಡಿಸಿಕೊಳ್ಳಲು ಗಳಿಸಿದ ಹಣವನ್ನು ಕಳೆದುಕೊಳ್ಳುತ್ತಿದ್ದೇವೆ. ಹೀಗಾಗಿ ವರ್ಷಕ್ಕೊಮ್ಮೆಯಾದರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದ ರಕ್ಷಣೆ ಮಾಡಿಕೊಳ್ಳಬೇಕು ಎಂದು ಉಡುಪಿಯ ಚ್ಯವನ ಇನ್ಸಿಟ್ಯೂಟ್ ಆಫ್ ಪಾರಾಮೆಡಿಕಲ್ ಸಾಯನ್ಸ್‍ನ ಸ್ಥಾಪಕ ಪಿ.ಎ.ಭಟ್ ಹೇಳಿದರು.

?

ಸೋಷಿಯಲ್ ವೆಲ್ಫೇರ್ ಫೆಡರೇಶನ್ ಗಂಗೊಳ್ಳಿ ಮತ್ತು ಚ್ಯವನ ಇನ್ಸಿಟ್ಯೂಟ್ ಆಫ್ ಪಾರಾಮೆಡಿಕಲ್ ಸಾಯನ್ಸ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿ ಪೋಸ್ಟ್ ಆಫೀಸು ಬಳಿಯಿರುವ ಅಂಜುಮಾನ್ ಆಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ಭಾನುವಾರ ಜರಗಿದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಮಧುಮೇಹ ಮತ್ತು ರಕ್ತಗುಂಪು ವರ್ಗೀಕರಣ ಶಿಬಿರದಲ್ಲಿ ಅವರು ಮಾತನಾಡಿದರು.

ಗಂಗೊಳ್ಳಿಯ ಸೋಷಿಯಲ್ ವೆಲ್ಫೇರ್ ಫೆಡರೇಶನ್‍ನ ಅಧ್ಯಕ್ಷ ಅಯೂಬ್ ಬೆದ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಎ.ಜೆ.ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರಸನ್ನ ಕೆ.ಎಸ್., ಡಾ.ಸತ್ಯಜಿತ್, ಗಂಗೊಳ್ಳಿ ಮೊಹಿದ್ದೀನ್ ಮಸೀದಿಯ ಖತೀಬರಾದ ಮೌಲಾನಾ ಅಬ್ದುಲ್ ವಹಾಬ್, ಜುಮ್ಮಾ ಮಸೀದಿಯ ಮಾಜಿ ಖತೀಬರಾದ ಮೌಲಾನಾ ಅಬ್ದುಲ್ ಮತಿನ್ ಸಿದ್ಧಿಕಿ, ಗಂಗೊಳ್ಳಿ ತೌಹೀದ್ ಎಜ್ಯುಕೇಶನ್ ಟ್ರಸ್ಟ್‍ನ ಆಡಳಿತಾಧಿಕಾರಿ ಎ.ಎ.ಖಾನ್, ಅಂಜುಮಾನ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಅನ್ಸೂರ್ ನಾಕುದಾ, ಶ್ರೀ ಜಟ್ಟಿಗೇಶ್ವರ ಯುತ್ ಕ್ಲಬ್‍ನ ಅಧ್ಯಕ್ಷರಾದ ನಾಗರಾಜ ಖಾರ್ವಿ, ಗೋಪಾಲ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

ಮಹಮ್ಮದ್ ಜಲಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರುಹಾಬ್ ಸಾರಂಗ್ ವಂದಿಸಿದರು.

ವರದಿ : ಬಿ. ನರಸಿಂಹ ನಾಯಕ್ ಉಪ್ಪುಂದ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)