ದೆಹಲಿಗಿಂತ ಹೆಚ್ಚು ಮಾಲಿನ್ಯ ವಾರಣಾಸಿಯಲ್ಲಿ ದಾಖಲು

0
147
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನವದೆಹಲಿ(ನ.13): ಮಿತಿಮೀರಿದ ವಾಯುಮಾಲಿನ್ಯದಿಂದಾಗಿ ರಾಜಧಾನಿ ನವದೆಹಲಿ ಎಲ್ಲರಿಂದ ಟೀಕೆಗೆ ಗುರಿಯಾಗುತ್ತಿದೆ. ಮಾಲಿನ್ಯ ನಿಯಂತ್ರಿಸಲು ಆಪ್ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಟೀಕೆಗಳೂ ವ್ಯಕ್ತವಾಗಿವೆ. ಆದರೆ ಅಚ್ಚರಿಯ ವಿಷಯವೆಂದರೆ, ದೆಹಲಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯನ್ನು ಪ್ರತಿನಿಧಿಸುವ ವಾರಾಣಸಿ ಅತಿ ಹೆಚ್ಚು ಮಾಲಿನ್ಯಕಾರಕವಾಗಿದೆ.

ಇತ್ತೀಚೆಗೆ ಸಮೀಕ್ಷೆ ನಡೆಸಲಾದ ದೇಶದ 42 ನಗರಗಳಲ್ಲಿ ವಾರಾಣಸಿ ಅತ್ಯಂತ ಹೆಚ್ಚು ವಾಯುಮಾಲಿನ್ಯ ಹೊಂದಿದ ಎಂಬ ಅಪಖ್ಯಾತಿಗೆ ಪಾತ್ರವಾಗಿದೆ.ಉತ್ತರ ಭಾರತದಲ್ಲಿ ಕಟಾವಾದ ಬೆಳೆಯ ತ್ಯಾಜ್ಯವನ್ನು ಈ ಸಂದರ್ಭದಲ್ಲಿ ಸುಡಲಾಗುತ್ತಿದ್ದು, ಮಾಲಿನ್ಯ ಏರಿಕೆಗೆ ಕಾರಣವಾಗಿದೆ. ವಾಯುಮಾಲಿನ್ಯದಲ್ಲಿ ವಾರಾಣಸಿಯು ದಿಲ್ಲಿಯನ್ನೂ ಮೀರಿಸಿರುವುದು ಆತಂಕಕಾರಿಯಾಗಿದೆ. ವಾರಾಣಸಿಯ ವಾಯುಮಾಲಿನ್ಯ ಪ್ರಮಾಣವು ‘491’ ಇದ್ದು, ನಂತರದ ಸ್ಥಾನ ಗುರುಗ್ರಾಮ (480), ನವದೆಹಲಿ (468), ಲಖನೌ (462) ಹಾಗೂ ಕಾನ್ಪುರ (461) ಈ ಮಾಲಿನ್ಯ ಪ್ರಮಾಣವು 401ರಿಂದ 500ರವರೆಗೆ ತಲುಪಿದಾಗ ವಾಯುಮಾಲಿನ್ಯ ಮಿತಿ ಮೀರಿದೆ ಎಂದರ್ಥ.

ಇದರಿಂದ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಸ್ವಚ್ಛ ಭಾರತ ಅಭಿಯಾನದ ನೇತೃತ್ವ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯು ಮಾಲಿನ್ಯ ನಿಯಂತ್ರಣದಲ್ಲಿ ಹಿಂದೆ ಬಿದ್ದಿರುವುದು ಸ್ವತಃ ಪ್ರಧಾನಿಯವರಿಗೆ ಮುಜುಗರ ತರಬಲ್ಲ ಸಂಗತಿಯಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)