ಮೂಡುಬಿದಿರೆ : 15ನೇ ವರ್ಷದ “ಕೋಟಿ-ಚೆನ್ನಯ” ಕಂಬಳೋತ್ಸವ ಸಂಪನ್ನ

0
15

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮೂಡುಬಿದಿರೆ : ಇಲ್ಲಿನ ಕಡಲಕೆರೆ ನಿಸರ್ಗಧಾಮದ ಕಂಬಳದ ಕರೆಯಲ್ಲಿ ಶನಿವಾರ ಬೆಳಿಗ್ಗೆ ಆರಂಭಗೊಂಡ 15 ನೇ ವರ್ಷದ ಹೊನಲು ಬೆಳಕಿನ “ಕೋಟಿ-ಚೆನ್ನಯ” ಜೋಡುಕರೆ ಕಂಬಳೋತ್ಸವವು ಭಾನುವಾರ ಬೆಳಿಗ್ಗೆ ಸಂಪನ್ನಗೊಂಡಿತು.

    

ಶನಿವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಂ.ಎನ್. ರಾಜೇಂದ್ರ ಕುಮಾರ್, ಕಬಡ್ಡಿ ಕ್ರೀಡೆಯ ಸಾಧಕ ಸುಕೇಶ್ ಹೆಗ್ಡೆ ಕಡ್ತಲ, ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ, ಉದ್ಯಮಿ ಗಣೇಶ್ ಕಾಮತ್ ಸಹಿತ ಕಂಬಳದ ಇಬ್ಬರು ಓಟಗಾರರಾದ ಕೊಳಕೆಗುತ್ತು ಆನಂದ ಕೋಟ್ಯಾನ್ ಮತ್ತು ನಕ್ರೆ ಜಯಕರ ಮಡಿವಾಳ ಅವರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.

ಕಳೆದ ಒಂದು ವರ್ಷದಿಂದ ನಿಷೇಧದ ಅಡಿಗೆ ಸಿಲುಕಿಗೊಂಡಿದ್ದ ಕಂಬಳಕ್ಕೆ ಸುಪ್ರಿಂಕೋರ್ಟ್ ಹಸಿರು ನಿಶಾನೆ ತೋರಿದ ಬಳಿಕ ಮೂಡುಬಿದಿರೆಯಲ್ಲಿ ಆಯೋಜನೆಗೊಂಡ “ಕೋಟಿ-ಚೆನ್ನಯ” ಜೋಡುಕರೆ ಕಂಬಳವು ವಿಜಯೋತ್ಸವದ ಸಂಕೇತವಾಗಿತ್ತು. ಈ ಹಿನ್ನಲೆಯಲ್ಲಿ ಮೂಡುಬಿದಿರೆಯ ಕಂಬಳದಲ್ಲಿ ಸಂಜೆಯ ವೇಳೆಗೆ ಅಧಿಕ ಸಂಖ್ಯೆಯ ಜನರು ಕಂಬಳದ ಕರೆಯ ಸುತ್ತಮುತ್ತ ಕಿಕ್ಕಿರಿದು ಸೇರಿಕೊಂಡಿದ್ದರು. ಅಲ್ಲದೆ ವಾಹನಗಳ ದಟ್ಟಣೆ ಹೆಚ್ಚಾಗಿದ್ದರಿಂದರಿಂದ ಟ್ರಾಫಿಕ್ ಸಮಸ್ಯೆಯೂ ಕಂಡು ಬಂದಿತ್ತು. ಯಾವುದೇ ತೊಂದರೆಯಾಗದಂತೆ ಕಂಬಳ ನಡೆಯುವ ಆವರಣದೊಳಗಡೆ ಹೆಚ್ಚಿನ ಸಿಸಿ ಕೆಮರಾಗಳನ್ನು ಅಳವಡಿಸಲಾಗಿತ್ತು. ಕಂಬಳದಲ್ಲಿ ಭಾಗವಹಿಸಿದ ಮತ್ತು ವೀಕ್ಷಿಸಿದ ಎಲ್ಲರಿಗೂ ಬೆಳಿಗ್ಗೆ ಮತ್ತು ಸಂಜೆ ವೇಳೆಗೆ ಉಪಹಾರದ ವ್ಯವಸ್ಥೆ, ಮಧ್ಯಾಹ್ನ ಗಂಜಿಯೂಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕಂಬಳ ಸಮಿತಿಯ ಅಧ್ಯಕ್ಷ, ಮೂಡುಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಕೋಶಾಧ್ಯಕ್ಷ ಭಾಸ್ಕರ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಕೆ.ಗುಣಪಾಲ ಕಡಂಬ, ಕಾರ್ಯದರ್ಶಿಗಳಾದ ಸುರೇಶ್ ಪ್ರಭು, ರತ್ನಾಕರ ಸಿ ಮೊೈಲಿ, ಚಂದ್ರಹಾಸ ಸನಿಲ್, ಹರ್ಷವರ್ಧನ ಪಡಿವಾಳ್, ಮೂಡುಬಿದಿರೆ ತಹಸೀಲ್ದಾರ್ ಮೊಹಮ್ಮದ್ ಇಸಾಕ್, ಎಸಿಎಫ್ ಸುಬ್ರಹ್ಮಣ್ಯ, ವಲಯ ಅರಣ್ಯಾಧಿಕಾರಿ ಅರಣ್ಯ ಅಧಿಕಾರಿ ಪ್ರಕಾಶ್ ಪೂಜಾರಿ, ಎಸ್‍ಐ ಶಂಕರ ನಾಯರಿ, ಮಂಗಳೂರು ಮೀನುಗಾರಿಕಾ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ ಮಗದ ಸಹಿತ ಗಣ್ಯರು ಪಾಲ್ಗೊಂಡಿದ್ದರು.

ಕಂಬಳ ಫಲಿತಾಂಶ

ಕನೆಹಲಗೆ ಪ್ರಥಮ: ಬಾರ್ಕೂರು ಶಾಂತರಾಮ ಶೆಟ್ಟಿ , ಹಲಗೆ ಮುಟ್ಟಿದವರು: ಶಿರೂರು ಮಂದಾರ್ತಿ ಮುದ್ದುಮನೆ ಗೋಪಾಲ ನಾಯ್ಕ್

ಕನೆಹಲಗೆ ದ್ವಿತೀಯ: ವಾಮoಜೂರು ತಿರುವೈಲ ಗುತ್ತು ನವೀನ್’ಚಂದ್ರ ಆಳ್ವ , ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್

ಹಗ್ಗ ಹಿರಿಯ ಪ್ರಥಮ: ಮೂಡಬಿದಿರೆ ಕರಿoಜೆ ವಿನು ವಿಶ್ವನಾಥ ಶೆಟ್ಟಿ ,ಓಡಿಸಿದವರು: ಪಣಪೀಲು ಪ್ರವೀನ್ ಕೋಟ್ಯಾ ನ್

ಹಗ್ಗ ಹಿರಿಯ ದ್ವಿತೀಯ: ಕಾರ್ಕಳ ಜೀವನ್’ದಾಸ್ ಅಡ್ಯoತಾಯ ,ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ್ರು

ಹಗ್ಗ ಕಿರಿಯ ಪ್ರಥಮ : ನಿಟ್ಟೆ ಪರಪ್ಪಾ ಡಿ ಸುರೇಶ್ ಕೋಟ್ಯಾನ್, ಓಡಿಸಿದವರು: ನಕ್ರೆ ಮಂಜುನಾಥ ಭಂಡಾರಿ

ಹಗ್ಗ ಕಿರಿಯ ದ್ವಿತೀಯ : ಮೂಡಬಿದಿರೆ ಕರಿoಜೆ ವಿನು ವಿಶ್ವನಾಥ ಶೆಟ್ಟಿ , ಓಡಿಸಿದವರು: ಪಣಪೀಲು ಪ್ರವೀನ್ ಕೋಟ್ಯಾ ನ್

ನೇಗಿಲು ಹಿರಿಯ ಪ್ರಥಮ : ಬಂಟ್ವಾಳ ಮಹಾಕಾಳಿಬೆಟ್ಟು ಸೀತಾರಾಮ್ ಶೆಟ್ಟಿ ‘ಎ’, ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ್ರು

ನೇಗಿಲು ಹಿರಿಯ ದ್ವಿತೀಯ : ಬೋಳದ ಗುತ್ತು ಸತೀಶ್ ಶೆಟ್ಟಿ ‘ಎ’, ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಮಾಧವ ಶೆಟ್ಟಿ

ನೇಗಿಲು ಕಿರಿಯ ಪ್ರಥಮ : ಅಳಿಯೂರು ಮಿತ್ತೋಟ್ಟು ಸೀತಾರಾಮ್ ಆನಂದ ಶೆಟ್ಟಿ ‘ಎ’, ಓಡಿಸಿದವರು: ಮರೋಡಿ ಶ್ರೀಧರ್

ನೇಗಿಲು ಕಿರಿಯ ದ್ವಿತೀಯ : ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ‘ಬಿ’, ಓಡಿಸಿದವರು: ಆಳದಂಗಡಿ ರವಿಕುಮಾರ್

ಅಡ್ಡಹಲಗೆ ಪ್ರಥಮ : ಹಂಕರಜಾಲು ರಾಮಚಂದ್ರ ಭಿರ್ಮಣ್ಣ ಶೆಟ್ಟಿ ‘ಬಿ’, ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್

ಅಡ್ಡಹಲಗೆ ದ್ವಿತೀಯ : ಗುರುಪುರ ಕೆದುಬರಿ ಯಶೋಧ ಗುರುವಪ್ಪ ಪೂಜಾರಿ, ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ.

ಕೆನೆಹಲಗೆ ವಿಭಾಗದಲ್ಲಿ 2, ಅಡ್ಡಹಲಗೆ-7, ಹಗ್ಗ ಹಿರಿಯ-15, ನೇಗಿಲು ಹಿರಿಯ-33, ಹಗ್ಗ ಕಿರಿಯ-20, ನೇಗಿಲು ಕಿರಿಯ-60 ಜೊತೆ ಸಹಿತ ಒಟ್ಟು 137 ಕೋಣಗಳು ಭಾಗವಹಿಸಿದ್ದವು.

ಹಗ್ಗ ಹಾಗೂ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಎರಡು ಪವನ್, ದ್ವಿತೀಯ ಒಂದು ಪವನ್ ಚಿನ್ನ, ಹಿರಿಯ ವಿಭಾಗದಲ್ಲಿ ಪ್ರಥಮ 1 ಪವನ್ ಹಾಗೂ ದ್ವಿತೀಯ ಅರ್ಧ ಪವನ್ ಚಿನ್ನ ಹಾಗೂ ವಿಜೇತ ಕೋಣಗಳನ್ನು ಓಡಿಸಿದವರಿಗೆ ಕಾಲು ಪವನ್ ಚಿನ್ನದೊಂದಿಗೆ ಪುರಸ್ಕರಿಸಲಾಯಿತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia