ಬೈಂದೂರು ರೋಟರಿ ಕ್ಲಬ್ ವಲಯ 1ರ ಸಾಮರಸ್ಯ ಕ್ರೀಡಾಕೂಟ ಉದ್ಘಾಟನೆ

0
155
dinetmedia

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ನ.13 : ಇಲ್ಲಿನ ರೋಟರಿ ಕ್ಲಬ್ ವಲಯ 1ರ ರೋಟರಿ ಸದಸ್ಯರಿಗಾಗಿ ಹಾಗೂ ಇನ್ನರವೀಲ್ ಸದಸ್ಯರಿಗಾಗಿ ಸಾಮರಸ್ಯ ಕ್ರೀಡಾಕೂಟ ಬೈಂದೂರಿನ ಗಾಂಧಿ ಮೈದಾನದಲ್ಲಿ ಭಾನುವಾರ ನಡೆಯಿತು.

ಸಾಮರಸ್ಯ ಕ್ರೀಡಾಕೂಟವನ್ನು ಬೆಂಗಳೂರು ಬ್ಲೂಸ್ ಪ್ರೋ ಕಬಡ್ಡಿ ಆಟಗಾರ ಹರೀಶ್ ನಾಯ್ಕ್ ಉದ್ಘಾಟನೆ ಮಾಡಿ ಶುಭಹಾರೈಸಿದರು.

ವಲಯ 1ರ ಸಹಾಯಕ ಗವರ್ನರ್ ಕೆ.ಕೆ.ಕೃಷ್ಣ ಕಾಂಚನ್ ಸಾಮರಸ್ಯ ಕ್ರೀಡಾಕೂಟ ಉದ್ದೇಶಿಸಿ ಮಾತನಾಡಿ ಕ್ರೀಡೆಯಿಂದ ಪರಸ್ಪರ ಸೌಹಾರ್ದತೆ, ಸಹೋದರ ಭಾವ ಬೆಳೆಯುತ್ತದೆ. ಎಲ್ಲಾ ರಂಗಗಳಲ್ಲಿ ಸೇವೆಗೈಯುತ್ತಿರುವ ರೋಟರಿ ಕ್ಲಬ್ ಸಮಾಜದ ಶಕ್ತಿಯಾಗಿದೆ. ಕ್ರೀಡಾ ಮನೋಭಾವನೆಯಿಂದಾಗಿ ಜೀವನದಲ್ಲಿ ಸೋಲು ಎಂಬುದಿಲ್ಲ. ಕ್ರೀಡೆಯಿಂದ ಆರೋಗ್ಯ ವೃದ್ಧಿ, ಮಾನಸಿಕ ಒತ್ತಡ ಕಡಿಮೆಯಾಗಲು ಸಾಧ್ಯ ಎಂದರು.

ಸಮಾರಂಭ ಅಧ್ಯಕ್ಷತೆಯನ್ನು ಬೈಂದೂರು ರೋಟರಿ ಅಧ್ಯಕ್ಷ ಹೆಚ್.ಕೃಷ್ಣಪ್ಪ ಶೆಟ್ಟಿ ವಹಿಸಿದರು. ಮುಖ್ಯಅತಿಥಿಗಳಾಗಿ ವಲಯ 1ರ ಸಹಾಯಕ ಗವರ್ನರ್ ಕೆ.ಕೆ.ಕೃಷ್ಣ ಕಾಂಚನ್, ವಲಯ ಸೇನಾನಿ ಜಯಪ್ರಕಾಶ್ ಶೆಟ್ಟಿ, ಝೋನಲ್ ಲೆಟಿನೆಂಟ್ ಝೋನ್-1ರ ಮನೋಜ್ ನಾಯರಿ, ರೋಟರಿಯ ಝೋನಲ್ ಸ್ಪೋಟ್ರ್ಸ್ ಕೋ-ಆರ್ಡಿನೇಟರ್ ಶ್ರೀಪಾದ ಉಪಾಧ್ಯ, ರೋಟರಿ ಕ್ಲಬ್ ಸ್ಪೋಟ್ರ್ಸ್ ಚೇರ್‍ಮೆನ್ ಐ.ನಾರಾಯಣ ಶೆಟ್ಟಿ, ಸಾಮರಸ್ಯ ಕ್ರೀಡಾಕೂಟದ ಪ್ರಾಯೋಜನಕ ಜಯಾನಂದ ಹೋಬಳಿದಾರ್ ಮಾಜಿ ಆಡಳಿತ ಧರ್ಮದರ್ಶಿಗಳು ಶ್ರೀಕ್ಷೇತ್ರ ಕೊಲ್ಲೂರು ಉಪಸ್ಥಿತರಿದ್ದರು.

ರೋಟರಿ ಬೈಂದೂರು ಅಧ್ಯಕ್ಷ ಕೃಷ್ಣಪ್ಪ ಶೆಟ್ಟಿ ಸ್ವಾಗತಿಸಿದರು, ರೋಟರಿ ಸದಸ್ಯ ಸುಧಾಕರ.ಪಿ ಕಾರ್ಯಕ್ರಮ ನಿರ್ವಹಿಸಿದರು, ರೋಟರಿ ಕಾರ್ಯದರ್ಶಿ ಡಾ.ಪ್ರವೀಣಕುಮಾರ್ ಶೆಟ್ಟಿ ವಂದಿಸಿದರು.

ಚಿತ್ರ/ವರದಿ : ಸುಶಾಂತ್ ಬೈಂದೂರು

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)