ಕಣ್ಣಿನ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಕಣ್ಣಿನ ತಪಾಸಣಾ ಶಿಬಿರಗಳು ಸಹಕಾರಿ : ಡಾ.ರೂಪಶ್ರೀ

0
325
dinetmedia

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ನ.11 : ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಲಯನ್ಸ ಕಣ್ಣಿನ ಆಸ್ಪತ್ರೆ ಕೋಟ, ಲಯನ್ಸ್ ಟ್ರಸ್ಟ ಫಾರ್ ಸರ್ವಿಸಸ್ & ಚಾರಿಟೀಸ್ (ರಿ), ಕೋಟ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ನಿವಾರಣಾ ವಿಭಾಗ, ಉಡುಪಿ ವಿಜಯ್ ಬ್ಯಾಂಕ್ ರಿಟಾಯರ್ಯ ಆಫೀಸರ್ಸ್ ವೆಲ್‍ಫೇರ್ & ಸೋಷಿಯಲ್ ಸೆಂಟರ್ ಉಡುಪಿ ಜಿಲ್ಲೆ. ಮಾರಿಕಾಂಬ ಯೂತ್ ಕ್ಲಬ್ (ರಿ)., ಹವ್ಯಾಸಿ ಕಲಾತಂಡ ಕಳವಾಡಿ ಬೈಂದೂರು ಇವರ ಜಂಟಿ ಆಶ್ರಯದಲ್ಲಿ ಸಂಪೂರ್ಣ ಉಚಿತ ಕಣ್ಣಿನ ತಪಾಸಣಾ ಶಿಬಿರ ಶನಿವಾರ ದೊಂಬೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಮಂಗಳೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮಂಗಳೂರು ಇದರ ಉಪಮಹಾಪ್ರಬಂಧಕ ಕೃಷ್ಣ ಬಿಲ್ಲವ ದೊಂಬೆ ಸಂಪೂರ್ಣ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟನೆ ಮಾಡಿ ಶಿಬಿರದ ಬಗ್ಗೆ ಮಾಹಿತಿ ನೀಡಿದರು.

ಉಡುಪಿ ವಿಜಯ ಬ್ಯಾಂಕ್ ರಿಟಾಯರ್ಡ್ ಆಫಿಸರ್ಸ್ ವೆಲ್‍ಫೇರ್ & ಸೋಷಿಯಲ್ ಸೆಂಟರ್ ಇದರ ಅಧ್ಯಕ್ಷ ಎಚ್.ವಸಂತ ಹೆಗ್ಡೆ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು ಕಣ್ಣಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರಯ ವಿಶೇಷವಾದ ಕಾಳಜಿ ವಹಿಸಬೇಕು. ಅನೇಕ ಕಣ್ಣಿನ ರೋಗಗಳು ಸೂಕ್ತ ಮಾಹಿತಿ ಕೊರತೆಯಿಂದ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳನ್ನು ನಡೆಸುವುದರ ಮೂಲಕ ಜಾಗೃತಿ ಮೂಡಬೇಕು. ಹಾಗೇ 40ವರ್ಷದ ಬಳಿಕ ಪ್ರತಿಯೊಬ್ಬರಿಗೂ ಕಣ್ಣು ದೃಷ್ಟಿಯಲ್ಲಿ ದೋಷ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯರ ಬಳಿ ಸೂಕ್ತವಾದ ಚಿಕಿತ್ಸೆ ಪಡೆಯಬೇಕು ಎಂದರು.

ಕೋಟ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಲಯನ್ಸ್ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರೂಪಶ್ರೀ ಶಿಬಿರ ಉದ್ದೇಶಿಸಿ ಮಾತನಾಡಿ ಪ್ರತಿಯೊಬ್ಬ ಮನುಷ್ಯರಿಗೂ ಕಣ್ಣು ಅತಿ ಮುಖ್ಯ ಅಂಗ, ಹಾಗಾಗಿ ಕಣ್ಣಿನ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು. ಆರೋಗ್ಯದ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಕಣ್ಣಿನ ತಪಾಸಣಾ ಶಿಬಿರಗಳು ಸಹಕಾರಿಯಾಗಿದೆ. ದೇಶದಲ್ಲಿ ಲಕ್ಷಾಂತರ ಜನರು ಕಣ್ಣಗಳಿಲ್ಲದೇ ಬದುಕು ಸಾಗಿಸುತ್ತಿದ್ದಾರೆ. ಅಂಥವರ ಪಾಲಿಗೆ ನೇತ್ರ ದಾನದ ಮೂಲಕ ಬೆಳಕು ನೀಡಲು ಸಾಧ್ಯವಿದೆ ಎಂದರು.

ಈ ಸಂದರ್ಭದಲ್ಲಿ ಕೋಟ ಲಯನ್ಸ್ ಟ್ರಸ್ಟ್ ಫಾರ್ ಸರ್ವಿಸಸ್ & ಚಾರಿಟೀಸ್ ರಿ. ಲಯನ್ಸ್ ಕಣ್ಣಿನ ಆಸ್ಪತ್ರೆಯ ಅಧ್ಯಕ್ಷ ಲ.ಪಿ ರಾಜೀವ ಆಳ್ವ ಎಮ್.ಜೆ.ಎಫ್, ಮಾರಿಕಾಂಬ ಯೂತ್ ಕ್ಲಬ್ ಕಳವಾಡಿ ಇದರ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಪಡುವರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸದಾಶಿವ ಡಿ ಪಡುವರಿ, ಪಡುವರಿ ಗ್ರಾಮ ಪಂಚಾಯತ್ ಸದಸ್ಯ ಸಂಜೀವ ಮೊಗವೀರ, ಸುದರ್ಶನ ಹೆಗ್ಡೆ, ಕರುಣಾಕರ್ ಶೆಟ್ಟಿ, ಕೃಷ್ಣ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಎ.ಎಸ್.ಹೆಗ್ಡೆ ಉಪಸ್ಥಿತರಿದ್ದರು.

ಮಾರಿಕಾಂಬಾ ಯೂತ್ ಕ್ಲಬ್ ಸದಸ್ಯ ಪ್ರವೀಣ ಕಳವಾಡಿ ಸ್ವಾಗತಿಸಿದರು, ಮಾರಿಕಾಂಬಾ ಯೂತ್ ಕ್ಲಬ್ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಕಳವಾಡಿ ಕಾರ್ಯಕ್ರಮ ನಿರೂಪಿಸಿ/ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)