ಶೈವ, ವೈಷ್ಣವ ಮೈತ್ರಿಗೆ *ನಾಮ*ಇಟ್ಟ ಫಲಕ ! : ಉಡುಪಿ ಅನಂತೇಶ್ವರಗೆ ಅನಂತಾಸನ ಹೆಚ್ಚುವರಿ ನಾಮಕರಣ

0
1012

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶೈವ, ವೈಷ್ಣವ ಮೈತ್ರಿಗೆ *ನಾಮ*ಇಟ್ಟ ಫಲಕ !

ಉಡುಪಿ ಅನಂತೇಶ್ವರಗೆ ಅನಂತಾಸನ ಹೆಚ್ಚುವರಿ ನಾಮಕರಣ

ರಥಬೀದಿಯ ಪುರಾತನ ಶ್ರೀ ಅನಂತೇಶ್ವರ ದೇವಸ್ಥಾನಕ್ಕೆ ಶ್ರೀ ಅನಂತಾಸನ ಸನ್ನಿಧಿ ಎಂಬುದಾಗಿ ಹೊಸ ನಾಮಫಲಕ ಬಿದ್ದಿರುವುದು ಶೈವ ಮತ್ತು ವೈಷ್ಣವ ಮತಾನುಯಾಯಿಗಳ ಸಾಂಪ್ರದಾಯಿಕ ಜಗಳಕ್ಕೆ ನಾಂದಿ ಹಾಡಿದೆ.

ದೇವಸ್ಥಾಾನದ ಹೊರಭಾಗದಲ್ಲಿ ಅನಂತೇಶ್ವರ ದೇಗುಲ ಎಂಬ ಬೋರ್ಡ್ ಹಾಗೆಯೇ ಇದೆ. ಆದರೆ ಒಳಗೆ ತೀರ್ಥ ನೀಡುವ ಜಾಗದಲ್ಲಿ ಅನಂತಾಸನ ಸನ್ನಿಧಿ ಎಂಬ ಇಂಗ್ಲಿಷ್‌ನಲ್ಲಿ ಬೋರ್ಡ್ ಹಾಕಲಾಗಿದೆ.

ಮುಜರಾಯಿ ಇಲಾಖೆಗೆ ಸೇರಿದ ಈ ದೇವಸ್ಥಾನ ಅನಂತೇಶ್ವರ ಎಂದೇ ದಾಖಲೆಗಳಲ್ಲಿದೆ. ಅನಂತಾಸನ, ಅಜ್ಜಯ್ಯ ಎಂದು ಭಕ್ತರು ಕರೆಯುತ್ತಾಾರೆ. ಈಶ್ವರನ ಪೂಜೆ ನಡೆಯುತ್ತಿದೆ. ರುದ್ರಾಾಭಿಷೇಕ, ಶಿವರಾತ್ರಿ ಎಲ್ಲವೂ ಶಿವನಿಗೆ ಪೂಜೆ.

ಕೇರಳದ ಖ್ಯಾಾತ ಜ್ಯೋತಿಷಿ ಶಿವ ಆರಾಧಕರೇ ಆದ ಸ್ಮಾರ್ತ ಸಂಪ್ರದಾಯದ ಪದ್ಮನಾಭ ಶರ್ಮ ಅವರಲ್ಲಿ ದೇಗುಲದವರು ಅಷ್ಟ ಮಂಗಲ ಪ್ರಶ್ನೆ ಹಾಕಿಸಿದಾಗ ಅಲ್ಲಿ ಶಿವ, ಶೇಷ (ಅನಂತ) ಮತ್ತು ನಾರಾಯಣ ಸನ್ನಿಧಾನ ಇದೆ ಎಂದು ಹೇಳಿದ್ದರು. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಆಹ್ವಾನ ಪತ್ರಿಕೆಗಳಲ್ಲಿ ಅನಂತೇಶ್ವರದ ಜತೆ ಅನಂತಾಸನ ದೇವರ ಹೆಸರೂ ಹಾಕಲಾಗಿತ್ತು. ಆಗ ವಿವಾದ ಎದ್ದಿರಲಿಲ್ಲ.

ಭಕ್ತ್ರಿಗಾಗಿ ಇಂಗ್ಲಿಷ್ ಬೋರ್ಡ್ : “ದೇವಸ್ಥಾನಕ್ಕೆ ದೇಶದ ನಾನಾ ರಾಜ್ಯಗಳಿಂದ ಭಕ್ತರು ಬರುತ್ತಿದ್ದು, ಕನ್ನಡ ಅರ್ಥವಾಗದ ಹಿನ್ನೆಲೆಯಲ್ಲಿ ತೀರ್ಥ ನೀಡುವ ಭಟ್ಟರಲ್ಲಿ ನಿತ್ಯವೂ ಒಳಗಿರುವ ದೇವರು ಯಾರು ಎಂದು ಕೇಳುತ್ತಿದ್ದರು. ಅದಕ್ಕೆ:ಇಂಗ್ಲಿಷ್ ನಾಮ ಫಲಕ ಹಾಕಲಾಗಿದೆ. ಅನಂತೇಶ್ವರ ದೇವಸ್ಥಾನದ ಹೆಸರು ಎಂದೂ ಬದಲಿಸಿಲ್ಲ. ಬದಲಿಸುವುದೂ ಇಲ್ಲ. ಇಲ್ಲಿಗೆ ನೂರಾರು ವರ್ಷಗಳಿಂದಲೂ ಅನಂತಾಸನ ಎಂದೂ ಕರೆಯುತ್ತಿದ್ದಾಾರೆ. ಸ್ಥಳೀಯರು ಅಜ್ಜಯ್ಯ ದೇವರು ಎಂದೂ ಕರೆಯುತ್ತಾರೆ. ಇಲ್ಲಿ ರುದ್ರ, ಶೇಷ, ಹರಿಯ ಸಾನ್ನಿಧ್ಯವೂ ಇದೆ ಎಂದು ಶಿವನ ಆರಾಧಕ ಸ್ವಾರ್ತ ಜ್ಯೋತಿಷಿಗಳೇ ಹೇಳಿರುವುದರಿಂದ ನಾಮಫಲಕ ಹಾಕಲಾಗಿದೆ ಎಂದು ದೇವಸ್ಥಾಾನದ ವ್ಯವಸ್ಥಾಾಪಕರು ತಿಳಿಸಿದ್ದಾಾರೆ.

ದುರುದ್ದೇಶ ಇಲ್ಲ : ದೇವಸ್ಥಾನದ ಹೆಸರು ಬದಲಿಸುವ ದುರುದ್ದೇಶ ಇದ್ದಿದ್ದರೆ ಹೊರಭಾಗದ ಅನಂತೇಶ್ವರ ಎಂಬ ಬೋರ್ಡ್ ತೆಗೆದು ಹಾಕುತ್ತಿದ್ದೆವು. ದೇವರು ಎಲ್ಲರೂ ಒಂದೇ ಎಂಬ ಸದುದ್ದೇಶದಿಂದ ಹಾಕಲಾಗಿದೆ. ಒಂದು ದೇವರಿಗೆ ಎರಡು, ಮೂರು ಹೆಸರು ಇದ್ದರೆ ತಪ್ಪಲ್ಲ ಎನ್ನುವುದು ದೇಗುಲ ವ್ಯವಸ್ಥಾಾಪಕರ ವಾದ.

ಜಗಳಕ್ಕೆ ನಾಂದಿ

ಹರಿ ಹರರಲ್ಲಿ ಭೇದ ಇಲ್ಲಾ.… ಎಂಬ ಹಾಡು ಕೇಳಿದ್ದೀರಿ. ಆದರೆ ಭಕ್ತರು ಈಗಲೂ ಭೇದ ಹುಡುಕುತ್ತಲೇ ಇದ್ದಾರೆ. ಶ್ರೀ ಅನಂತೇಶ್ವರ ಸನ್ನಿಿಧಿಯಲ್ಲಿ ಹರನೂ ಹರಿಯೂ ಇದ್ದಾಾನೆ ಎನ್ನುವುದು ಮಾಧ್ವರ ವಾದ.

ಶಿವನೂ ಶ್ರೇಷ್ಠ ಹರಿಯೂ ಶ್ರೇಷ್ಠ. ಆದರೆ ಶಿವನ ಸನ್ನಿಿಧಾನಕ್ಕೆ ಅನಂತಾಸನ ಎಂಬ ಹೆಸರು ಇಟ್ಟಿರುವುದು ಶೈವರ ನಂಬಿಕೆಗೆ ನೋವಾಗಿದೆ ಎನ್ನುವುದು ಶೈವರ ಆಕ್ಷೇಪ.

ಮಾಧ್ವರ ವಾದ
ಅನಂತೇಶ್ವರ ಅಂದರೆ ರುದ್ರ (ಶಿವ). ಅನಂತಾಸನ ಅಂದರೆ ಅನಂತ ಎಂಬ ಹಾವನ್ನೇ ಅಸನವಾಗಿ ಉಳ್ಳ ವಿಷ್ಣು. ಹೀಗಾಗಿ ಗರ್ಭಗುಡಿಯಲ್ಲಿ ಇರೋದು ಶಿವನ ಲಿಂಗ ಅಂತಾ ಶೈವರು ವಾದಿಸಿದರೆ, ವೈಷ್ಣವರು ವಿಷ್ಣು ಲಿಂಗ ರೂಪದ ಲಿಂಗ ಎಂದು ಹೇಳುತ್ತಿದ್ದಾರೆ. ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ. ಇದರ ಆಡಳಿತ ಮುಕ್ತೇಸರರಾಗಿ ಮಾಧ್ವ ಸಂಪ್ರದಾಯದ ಪುತ್ತಿಗೆ ಮಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಸ್ವಾಾಮೀಜಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಿವ ಕನಿಷ್ಠ, ವಿಷ್ಣು ಶ್ರೇಷ್ಠ ಎಂಬ ಭಾವನೆ ತಪ್ಪು. ಅನಂತಾಸನ ಎಂದು ಮನೆಯಲ್ಲಿ ಹೇಳಿಕೊಳ್ಳಲಿ. ತ್ರಿಮೂರ್ತಿಗಳು ಒಂದೇ ಎಂಬ ಭಾವನೆ ಇರುವಾಗ ಈ ರೀತಿ ಹೆಸರು ಬದಲಾಯಿಸಿದ್ದು ಸರಿ ಅಲ್ಲ, ಸರಿ ಮಾಡದೇ ಇದ್ದರೆ ಇದರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಶೈವ ವಿದ್ವಾಾಂಸ ಪ್ರಭಾಕರ ಭಟ್ ಹೇಳಿದ್ದಾಾರೆ.

ಮಧ್ವ, ವಾದಿರಾಜರು ಹೇಳಿದ್ದರು !

ದ್ವೈತ ಮತದ ಸ್ಥಾಪಕ ಮಧ್ವಾಾಚಾರ್ಯರೂ ಅನಂತಾಸನ ಎಂದು ತಮ್ಮ ಮೂಲ ಗ್ರಂಥಗಳಲ್ಲಿ ಬರೆದಿದ್ದರು.

“ಅನಂತೇಶ್ವರದ ಪ್ರಾಾಚೀನ ಉತ್ಸವಮೂರ್ತಿ ಅನಂತ ಪದ್ಮನಾಭ. ಹೀಗೆ ಇದೊಂದು ಹರಿಹರ ಕ್ಷೇತ್ರ. ಹರ ಲಿಂಗದಲ್ಲಿ ಹರಿ ನೆಲೆಸಿದ ಕ್ಷೇತ್ರ” ಎಂದು ಶ್ರೀ ವಾದಿರಾಜ ಸ್ವಾಾಮೀಜಿ ಹೇಳಿ ಕೊಂಡಾಡಿದ್ದಾರೆ.

ಇತಿಹಾಸ : ಗಜಪೃಷ್ಟಾಕಾರದ ಗರ್ಭ ಗೃಹ ಪ್ರಾಾಚೀನತೆಯನ್ನು ಸಾರುತ್ತದೆ. ಶ್ರೀ ಅನಂತೇಶ್ವರ ಉಡುಪಿಯ ಅತ್ಯಂತ ಪುರಾತನ ದೇವಾಲಯ. ಶಿವಳ್ಳಿಎಂದು ಈ ಗ್ರಾಾಮಕ್ಕೆ ಹೆಸರು ಬರಲು ಕಾರಣ ಇದೇ ದೇವಸ್ಥಾಾನ. ಈ ದೇವಾಲಯವನ್ನು ಕೇಂದ್ರವಾಗಿಸಿ ನೆಲೆಗೊಂಡ ಬ್ರಾಾಹ್ಮಣ ಸಮುದಾಯವೆ ಶಿವಳ್ಳಿ ಬ್ರಾಾಹ್ಮಣರು ಎಂದು ಪ್ರಸಿದ್ಧರಾದರು.

ಪರ್ಯಾಯ ಪೀಠ ಏರುವ ಸ್ವಾಮೀಜಿಗಳು ಶ್ರೀಕೃಷ್ಞ ಮಠ ಪ್ರವೇಶಕ್ಕೆ ಮುನ್ನ ಚಂದ್ರ.ಮೌಳೀಶ್ವರ, ಅನಂತೇಶ್ವರನ ದರ್ಶನ ಪಡೆಯುತ್ತಾರೆ. ಶ್ರೀಕೃಷ್ಞ ಮಠದರು ಬಾಡಿಗೆ ರೂಪದಲ್ಲಿ ಅನಂತೇಶ್ವರಗೆ ಎಣ್ಣೆ ನೀಡುವುದೂ ಈಗಲೂ ನಡೆಯುತ್ತಿದೆ.

ಜಿತೇಂದ್ರ ಕುಂದೇಶ್ವರ ವಿಶ್ವವಾಣಿ ಉಡುಪಿ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)