ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಇವರ 8ನೇ ವರ್ಷದ ಸ್ನೇಹ ಸಮ್ಮಿಲನ

0
354
dinetmedia

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ದುಬೈ : ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಇವರ 8ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಕದಂ ರೂವಾರಿ ಎಲಿಗೆಂಟ್ ಗ್ರೂಪ್ ಕಂಪೆನಿಯ ಆಡಳಿತ ನಿರ್ಧೇಶಕರಾದ ದಿನೇಶ್ ದೇವಾಡಿಗ ನಾಗೂರೂ ಇವರ ನೇತ್ರತ್ವದಲ್ಲಿ ಆಜಮಾನ ಬೀಚ್ ಪೋರ್ಟ್ ನಲ್ಲಿ ಜರುಗಿತು. ರಾಮಚಂದ್ರ ದೇವಾಡಿಗ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕದಂ ದುಬೈ ಮಹಿಳಾ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಭೆಯಲ್ಲಿ ದೇವಾಡಿಗ ಸಂಘ ಮುಂಬೈನ ಅಧ್ಯಕ್ಷ ರವಿ.ಎಸ್ ದೇವಾಡಿಗ, ವಿಮರ್ಶಕ ಶ್ರಮಿಕ ಸಂಘಟಕ ವಾಗ್ಮಿಯಾದ ಹಿರಿಯಡ್ಕ  ಮೋಹನ್ದಾಸ್, ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ  ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಂಬಿಕಾ ರಾಜು ದೇವಾಡಿಗ ತ್ರಾಸಿ, ಮೊದಲಾದವರನ್ನು ಅಬಿನಂದಿಸಲಾಯಿತು.

ಮನುಕುಲದ ಶ್ರೇಷ್ಠ  ದೇವಾಡಿಗ ಸಾಧಕ ಪ್ರಶಸ್ತಿಯನ್ನು ಜಿಲ್ಲಾಪಂಚಾಯತ್ ಸದಸ್ಯೆ ಗೌರಿ ದೇವಾಡಿಗ ಇವರಿಗೆ ನೀಡಲಾಯಿತು.ಕದಂ ವಾರ್ಷಿಕ ವರದಿಯನ್ನು ಕದಂ ಸದಸ್ಯ ವಾಸು ದೇವಾಡಿಗ ಮಂಡಿಸಿದರು. ಸಭೆಗೆ ಆಗಮಿಸಿದ ಸಭಿಕರಿಗೆ ವಿವಿಧ ಬಗೆಯ ಮನೋರಂಜನಾ ಕಾರ್ಯಕ್ರವನ್ನು ಸದಸ್ಯ ಶ್ರೀಧರ್ ದೇವಾಡಿಗ ಮತ್ತು ಮಕ್ಕಳಿಗೆ ವಿವಿಧ ಬಗೆಯ ಸ್ಪರ್ಧೆಗಳನ್ನು ಆಶಾ ದೇವಾಡಿಗ ನೆರವೇರಿಸಿದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯರಾದ ರಾಜು ದೇವಾಡಿಗ ತ್ರಾಸಿ, ಶೀನ ದೇವಾಡಿಗ ಮರವಂತೆ ಮೊದಲಾದವರು ಉಪಸ್ಥಿತರಿದ್ದರು.

ಶಾರದಾ ದೇವಾಡಿಗ ನಾಗೂರೂ, ಸಪ್ತಸ್ವರ ಸಹಕಾರಿ ಕಾರ್ಯನಿರ್ವಾಹಣಾಧಿಕಾ ರಿಯಾದ ರವಿ ದೇವಾಡಿಗ ತಲ್ಲೂರು, ಲೀಲಾವತಿ ದೇವಾಡಿಗ ಮತ್ತು ರೇವತಿ ದೇವಾಡಿಗ ಇವರನ್ನು ಗುರುತಿಸಿ ಅಭಿನಂದಿಸಲಾಯಿತು.

ನಿತ್ಯಾನಂದ ದೇವವಾಡಿಗ ಸ್ವಾಗತಿಸಿದರು, ರವಿ ದೇವಾಡಿಗ ನಾಗೂರೂ ಸಂದೇಶ ವಾಚನಗೈದರು,ಸಭಾ ಕಾರ್ಯಕ್ರಮ ವಂದನೆಯನ್ನು ವಿಶಾಲಾಕ್ಷಿ ದಿನೇಶ್ ದೇವಾಡಿಗ ನಡೆಸಿದರು, ಸಾಂಸ್ಕೃತಿಕ ಕಾರ್ಯಕ್ರಮದ ನಿರ್ವಹಣೆಯನ್ನು ಯುವರಾಜ್ ಕೆ ದೇವಾಡಿಗ, ಮನೋಜ್ ದೇವಾಡಗ ಮತ್ತು ಸಂತೋಷ್ ದೇವಾಡಿಗ ನಡೆಸಿದರು.

ಚಿತ್ರ/ವರದಿ : ಪುರುಷೋತ್ತಮದಾಸ್ ಉಪ್ಪುಂದ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)