ಹುಂಡಿ ಎಣಿಕೆಯಲ್ಲಿ ದಾಖಲೆ ಬರೆದ ಕೊಲ್ಲೂರು ಮೂಕಾಂಬಿಕಾ ದೇವಾಲಯ

0
331
dinetmedia

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಕೊಲ್ಲೂರು ಅ.25 : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸೆಪ್ಟೆಂಬರ್ ನಲ್ಲಿ ದಾಖಲೆ ಪ್ರಮಾಣದ ಹಣ ಕಾಣಿಕೆ ರೂಪದಲ್ಲಿ ಹರಿದು ಬಂದಿದೆ. ಈವರೆಗಿನ ಎಲ್ಲಾ ದಾಖಲೆಗಳು ಬ್ರೇಕ್ ಆಗಿದ್ದು ಒಂದು ತಿಂಗಳಲ್ಲೇ ಬರೋಬ್ಬರಿ 1 ಕೋಟಿ 10 ಲಕ್ಷ ರೂಪಾಯಿ ಹುಂಡಿಗೆ ಬಿದ್ದಿದೆ.

   

ಕೊಲ್ಲೂರಿನಲ್ಲಿ ಪ್ರತಿ ತಿಂಗಳು ಹುಂಡಿಯ ಹಣವನ್ನು ಲೆಕ್ಕ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು ಈ ಬಾರಿ 1.10 ಕೋಟಿ ರೂಪಾಯಿ ಹುಂಡಿಗೆ ಕಾಣಿಕೆ ಬಿದ್ದಿದೆ. ಕಳೆದ ವರ್ಷ ಸಪ್ಟೆಂಬರ್ ತಿಂಗಳಲ್ಲಿ 1 ಕೋಟಿ 60 ಸಾವಿರ ರೂಪಾಯಿ ಸಂಗ್ರಹವಾಗಿ ಅದೇ ಈ ವರೆಗಿನ ದಾಖಲೆಯಾಗಿತ್ತು. ಈ ಪೈಕಿ 63 ಸಾವಿರ ರೂಪಾಯಿ 1000 ಮತ್ತು 500 ಮುಖಬೆಲೆಯ ಹಳೆಯ ನೋಟುಗಳು ಅನ್ನೋದು ವಿಶೇಷ.

ಈ ವರ್ಷ 9 ಲಕ್ಷ 40 ಸಾವಿರ ರೂಪಾಯಿ ಹೆಚ್ಚುವರಿ ಸಂಗ್ರಹವಾಗಿದೆ. ಮಂಗಳವಾರ ಬೆಳಗ್ಗೆಯಿಂದ ತಡರಾತ್ರಿಯವರೆಗೆ ದೇವಸ್ಥಾನದ ಸಿಬ್ಬಂದಿ, ಸಾರ್ವಜನಿಕರು, ಶಾಲಾ ಮಕ್ಕಳು ಕೊಲ್ಲೂರು ಕ್ಷೇತ್ರದ ಎಲ್ಲಾ ಹುಂಡಿಗಳನ್ನು ಲೆಕ್ಕ ಮಾಡಿದ್ದಾರೆ. ತಡರಾತ್ರಿ 12.30ರ ತನಕವೂ ಸಿಬ್ಬಂದಿ ಚಿಲ್ಲರೆ- ನೋಟು ವಿಭಜನೆ, ಕಟ್ಟು ಕಟ್ಟುವುದು- ಲೆಕ್ಕ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದರು ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ಅನುರಾಧಾ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಈ ಬಾರಿ ಹುಂಡಿಯಲ್ಲಿ ಒಂದು ಲಕ್ಷ ರೂಪಾಯಿ ಮೊತ್ತದ ವಿದೇಶಿ ಕರೆನ್ಸಿ ಸಂಗ್ರಹವಾಗಿದೆ. ದೇವಿ ಮೂಕಾಂಬಿಕೆಗೆ 870 ಗ್ರಾಂ ಚಿನ್ನದ ಆಭರಣ- 3 ಕಿಲೋ ಬೆಳ್ಳಿಯ ಆಭರಣಗಳು ಹರಕೆ ರೂಪದಲ್ಲಿ ಬಂದಿದೆ. ಇದೂವರೆಗಿನ ದೊಡ್ಡ ಮೊತ್ತದ ಚಿನ್ನ ಮತ್ತು ಬೆಳ್ಳಿಯ ಹರಕೆ. ಈ ಬಾರಿ 63 ಸಾವಿರ ರೂಪಾಯಿಯ ಹಳೇ ನೋಟುಗಳನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ. ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದೆ ಹೀಗೆ ಮಾಡಿದ್ರೋ..? ಇದರಲ್ಲೂ ಕಪ್ಪು ಹಣ ಇತ್ತೋ ಅನ್ನೋದು ಉತ್ತರ ಸಿಗದ ಪ್ರಶ್ನೆ.

ನವರಾತ್ರಿ ತಿಂಗಳಲ್ಲಿ ದೇಶಾದ್ಯಂತ ಭಕ್ತರುಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಬಂದು ತಮ್ಮ ಹರಕೆ ತೀರಿಸುತ್ತಾರೆ. ಕೇರಳ ತಮಿಳುನಾಡು ರಾಜ್ಯದಿಂದ ಹೆಚ್ಚು ಮಂದಿ ಭಕ್ತರು ಕೊಲ್ಲೂರು ಕ್ಷೇತ್ರಕ್ಕೆ ಬರುವುದು ವಾಡಿಕೆ. ಈ ಬಾರಿ ಭಕ್ತರ ಸಂಖ್ಯೆಯೂ ಜಾಸ್ತಿಯಾಗಿದೆ. ಜೊತೆಗೆ ಬಂದ ಭಕ್ತರು ಹುಂಡಿಗೆ ಹಾಕಿದ- ಹೊತ್ತುಕೊಂಡ ಹರಕೆಯ ಮೊತ್ತವೂ ಹೆಚ್ಚಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)