ಜೇಸಿಐ ಸಂಸ್ಥೆ ಹಲವು ಮಂದಿಯ ಸಾಧನೆಗೆ ವೇದಿಕೆ ಕಲ್ಪಿಸಿದ ಹೆಗ್ಗಳಿಕೆ ಹೊಂದಿದೆ : ಗೋಕುಲ್ ಶೆಟ್ಟಿ

0
203

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಸೆ.12 : ವ್ಯಕ್ತಿಯೊಬ್ಬರ ಪ್ರತಿಭೆ, ಸಾಮಥ್ರ್ಯ ತೋರ್ಪಡಿಸಲು ವೇದಿಕೆ ಬೇಕು. ಸಂಘ ಸಂಸ್ಥೆಗಳ ಮೂಲಕ ಈ ವೇದಿಕೆ ಲಭ್ಯವಾಗುತ್ತದೆ. ಜೇಸಿಐ ಸಂಸ್ಥೆ ಹಲವು ಮಂದಿಯ ಸಾಧನೆಗೆ ವೇದಿಕೆ ಕಲ್ಪಿಸಿದ ಹೆಗ್ಗಳಿಕೆ ಹೊಂದಿದೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಗೋಕುಲ್ ಶೆಟ್ಟಿ ಹೇಳಿದರು.

ಉಪ್ಪುಂದ ಜೇಸಿ ಸಪ್ತಾಹ ನಾಲ್ಕನೇ ದಿನದ ಸಭಾ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿದ ಇವರು ಯುವ ಸಮುದಾಯ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜೇಸಿಐ ಸಂಸ್ಥೆಯು ಸದಾ ಪ್ರೇರಣೆ ನೀಡುತ್ತಿದೆ ಎಂದರು.

 ಉಪ್ಪುಂದ ಪ್ರಗತಿ ಕೋ-ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ಲಕ್ಷ್ಮೀಕಾಂತ್ ಬೆಸ್ಕೂರು ಇವರಿಗೆ ಜೇಸಿ ಸಾಧನಶ್ರೀ ಪ್ರಶಸ್ತಿ ನೀಡಲಾಯಿತು.

ಯುವಕರು ದೇಶದ ಅಮೂಲ್ಯ ಸಂಪತ್ತು, ಸುಸಂಸ್ಕøತ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ಯುವ ಜನತೆ ಮನಸು ಮಾಡಬೇಕು. ಸ್ವ ಅಭಿವೃದ್ಧಿಯ ಜೊತೆಗೆ ಸಮಾಜದ ಅಭಿವೃದ್ಧಿ ಕಡೆಗೆ ಸದಾ ಚಿಂತನಾಶೀಲರಾಗಬೇಕು. ಜೇಸಿಐ ನಂತಹ ಸಂಸ್ಥೆಗಳು ಅನೇಕ ಕಾರ್ಯಗಳಲ್ಲಿ ಸಹಭಾಗಿತ್ವವನ್ನು ವಹಿಸುತ್ತಿದ್ದು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅನುಕೂಲವಾಗಿದೆ ಎಂದು ಉಪ್ಪುಂದ ಗ್ರಾ.ಪಂ.ಸದಸ್ಯ ಐ. ನಾರಾಯಣ ಹೇಳಿದರು

ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಗೋಕುಲ್ ಶೆಟ್ಟಿ, ಉಪ್ಪುಂದ ಗ್ರಾಮ ಪಂಚಾಯತ್ ಸದಸ್ಯ ಐ. ನಾರಾಯಣ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ವ್ಯವಸ್ಥಾಪನ ಸಮಿತಿ ಸದಸ್ಯ ನರಸಿಂಹ ಹಳಗೇರಿ, ಜೂನಿಯರ್ ಜೇಸಿ ಅಧ್ಯಕ್ಷ ರತನ್ ಉಪಸ್ಥಿತರಿದ್ದರು.

ಜೇಸಿಐ ಅಧ್ಯಕ್ಷ ಮಂಜುನಾಥ ದೇವಾಡಿಗ ಸ್ವಾಗತಿಸಿದರು, ನಾಲ್ಕನೇ ದಿನದ ಜೇಸಿಐ ಸಪ್ತಾಹ ಸಭಾಪತಿ ಜೇಸಿ ದೇವರಾಯ ದೇವಾಡಿಗ ವರದಿ ವಾಚಿಸಿ/ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಅಂತರಾಷ್ಟ್ರೀಯ ಮಟ್ಟದ ಜಾದುಗಾರ ಸತೀಶ್ ಹೆಮ್ಮಾಡಿ ಇವರಿಂದ ಭ್ರಮಾಲೋಕ್ ಜಾದು ಪ್ರದರ್ಶನ ನಡೆಯಿತು.

  

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia