ಮಾಡಿದ ಸಾಲ ಸಾವಿರಾರು ರೂಪಾಯಿ, ಮನ್ನಾ ಆಗಿದ್ದು 10 ರೂ…ತಲೆ ಜಜ್ಜಿಕೊಂಡ ರೈತ!

0
163

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಲಕ್ನೋ: ಉತ್ತರ ಪ್ರದೇಶ ಸರ್ಕಾರ ರೈತರ 36 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ . ಆದರೆ, ಸಾಲ ಮನ್ನಾದ ಪ್ರಮಾಣ ಪತ್ರ ಪಡೆಯುತ್ತಿರುವ ಅನ್ನದಾತ ಮಾತ್ರ ದಿಗಿಲುಗೊಂಡಿದ್ದಾನೆ.

ಹೌದು, ರೈತರಿಗೆ 10ರಿಂದ 215 ರೂಪಾಯಿ ಮಾತ್ರ ಸಾಲ ಮನ್ನಾ ಮಾಡಲಾಗಿರುವ ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ. !

ಸದ್ಯ ಉತ್ತರ ಪ್ರದೇಶದ ಅನೇಕ ಭಾಗಗಳಲ್ಲಿ ಯೋಗಿ ಆದಿತ್ಯಾನಾಥ್‌ ನೇತೃತ್ವದ ಸರ್ಕಾರ ರೈತರ ಸಾಲ ಮನ್ನಾ ಮಾಡಿರುವ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ರೈತರಿಗೆ ಪ್ರಮಾಣ ಪತ್ರಗಳನ್ನು ವಿತರಿಸುತ್ತಿದೆ. ಆದರೆ, ಹೀಗೆ ಸರ್ಕಾರದ ಸಾಲ ಮನ್ನಾದ ಪ್ರಮಾಣ ಪತ್ರಗಳನ್ನು ಪಡೆಯಲು ಬಂದಿರುವ ಅನ್ನದಾತ, ಪ್ರಮಾಣ ಪತ್ರದಲ್ಲಿನ ಸಾಲ ಮನ್ನಾ ಮೊತ್ತವನ್ನು ನೋಡಿ ಆಘಾತಗೊಂಡಿದ್ದಾನೆ.

ಹಮೀರ್‌ಪುರ್‌ದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮನೋಹರ್‌ ಲಾಲ್‌ ಭಾಗವಹಿದ್ದ ಕಾರ್ಯಕ್ರಮದಲ್ಲೇ ಸುಮಾರು 50 ಸಾವಿರ ಸಾಲವನ್ನು ಹೊಂದಿರುವ ಕೆಲ ರೈತರಿಗೆ 10 ರೂಪಾಯಿಯಿಂದ 20 ರೂಪಾಯಿ. ಹಾಗೂ ಇನ್ನು ಕೆಲವರಿಗೆ 215 ರೂಪಾಯಿ ಸಾಲ ಮನ್ನಾವಾಗಿರುವ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಇಷ್ಟೇ 50 ಸಾವಿರ ರೂಪಾಯಿ ಸಾಲವನ್ನು ಹೊಂದಿರುವ ಮತ್ತೊಬ್ಬ ರೈತನಿಗೆ 28 ಸಾವಿರ ಮನ್ನಾ ಮಾಡಿರುವ ಪ್ರಮಾಣ ಪತ್ರ ವಿತರಿಸಲಾಗಿದೆ. ಇದು ರೈತರ ಆಕ್ರೋಶ ಕಾರಣವಾಗಿದೆ.

ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಲಾಲ್‌, ತಪ್ಪು ಮುದ್ರಣದಿಂದ ಈ ರೀತಿಯಾಗಿರಬಹುದು. ತನಿಖೆ ನಡೆಸಿದ ಇದನ್ನು ಸರಿಪಡಿಸಲಾಗುವುದು ಎಂದು ಉಢಾಪೆ ಉತ್ತರ ಕೊಟ್ಟಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia