ಉಪ್ಪುಂದ : ಯಕ್ಷಗಾನ ಕಲಾವಿದರಿಗೆ ಸನ್ಮಾನ ಮತ್ತು ವೇಷ ಭೂಷಣ ಪರಿಕರಗಳ ಲೋಕಾರ್ಪಣೆ

0
157

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು, ಸೆ,12 : ಶ್ರೀ ಶಾರದಾಂಬಾ ಟ್ರೆಸ್ಟ್(ರಿ) ತೊಂಡೆಮಕ್ಕಿ ಬೈಂದೂರು ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ಸ್ಥಳೀಯ ಪ್ರಾಯೋಜಿತ ಕಾರ್ಯಕ್ರಮ. ಯಕ್ಷಗಾನ ಕಲಾವಿದರಿಗೆ ಸನ್ಮಾನ ಮತ್ತು ವೇಷ ಭೂಷಣ ಪರಿಕರಗಳ ಲೋಕಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ಮಾತ್ರಶ್ರೀ ಸಭಾಭವನ ಉಪ್ಪುಂದದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷರು ಕ.ಸಾ.ಪ ಉಡುಪಿ ಜಿಲ್ಲೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಡುಪಿ ಜಿಲ್ಲೆಯ ಉಪನಿರ್ದೇಶಕ ಮಹಾದೇವ, ಬೈಂದೂರು ಅಂಜಲಿ ಆಸ್ಪತ್ರೆಯ ಆಡಳಿತ ನಿರ್ದೇಶಕರು ಸುಬ್ರಮಣ್ಯ ಭಟ್, ಮಂಜು ದೇವಾಡಿಗ ಅರೆಹಾಡಿ, ರಂಜಿತ್ ಕುಮಾರ್ ಶೆಟ್ಟಿ ಕೋಟೇಶ್ವರ ಮೊದಲಾದವರು ಉಪಸ್ತಿತರಿದ್ದರು.

ಕಾರ್ಯಕ್ರಮದಲ್ಲಿ ಮೋಹನ ಹೊಳ್ಳ ವ್ಯವಸ್ಥಾಪಕರು ಯಕ್ಷದೇಗುಲ ಬೆಂಗಳೂರು ಹಾಗೂ ಶ್ರೀ ಸುಬ್ರಮಣ್ಯ ಧಾರೇಶ್ವರ ಹಿರಿಯ ಭಾಗವತರನ್ನು ಸನ್ಮಾನಿಸಲಾಯಿತು.

ಶ್ರೀ ಗಣೇಶ್ ಉಪ್ಪುಂದ ಅಧ್ಯಕ್ಷರು ಶ್ರೀ ಶಾರದಾಂಬಾ ಟ್ರೆಸ್ಟ್ (ರಿ) ಕಾರ್ಯಕ್ರಮದ ಪ್ರಾಯೋಜಕರು, ಸಭಾ ಕಾರ್ಯಕ್ರಮದ ಬಳಿಕ ಗಣೇಶ ಉಪ್ಪುಂದ ಬಳಗದವರಿಂದ ಯಕ್ಷಗಾನ ಪ್ರದರ್ಶನ ಪ್ರಸಂಗ:ಶ್ರೀ ರಾಮ ದರ್ಶನ ಜರುಗಿತು.

ಚಿತ್ರ/ವರದಿ : ಪುರುಷೋತ್ತಮದಾಸ್ ಉಪ್ಪುಂದ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia