ಮಂಗಳೂರು: ಶಾಲೆಗೆ ಹೋಗೋದನ್ನು ತಪ್ಪಿಸಲು ಅತ್ಯಾಚಾರ ನಾಟಕವಾಡಿದಳಾ ಬಾಲಕಿ!?

0
66

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮಂಗಳೂರು: ಶಾಲೆ ತಪ್ಪಿಸಿಕೊಳ್ಳಲು ಮಕ್ಕಳು ಏನೇನೋ ಸುಳ್ಳು ನೆಪ ಹೇಳುವುದನ್ನು ಕೇಳಿದ್ದೇವೆ. ಆದರೆ, ಇಲ್ಲೋರ್ವ ಬಾಲಕಿ ಅತ್ಯಾಚಾರದ ನಾಟಕವಾಡಿ ರಾದ್ಧಾಂತ ಸೃಷ್ಟಿಸಿದ ಪ್ರಸಂಗ ಪುತ್ತೂರಿನಲ್ಲಿ ನಡೆದಿದೆ.

ತಾನು ನಡೆದುಕೊಂಡು ಹೋಗುತ್ತಿದ್ದ ವೇಳೆ ಮಾರುತಿ ಒಮ್ನಿಯಲ್ಲಿ ಬಂದ ಇಬ್ಬರು ಅಪರಿಚಿತರು ಬಲಾತ್ಕಾರವಾಗಿ ಕೈಹಿಡಿದು ಚುಚ್ಚು ಮದ್ದು ನೀಡಿ ಮೂರ್ಛೆ ಹೋಗುವಂತೆ ಮಾಡಿದ್ದಾರೆ. ಬಳಿಕ ಓಮ್ನಿಯೊಳಗೆ ತನ್ನನ್ನು ಎಳೆದುಕೊಂಡು ಅತ್ಯಾಚಾರ ಎಸಗಿ ಪುತ್ತೂರಿನ ಬಸ್ ನಿಲ್ದಾಣದ ಬಳಿ ಎಸೆದು ಹೋಗಿದ್ದಾರೆ. ಪ್ರಜ್ಞೆ ಬಂದ ಬಳಿಕವೇ ತಾನು ಪುತ್ತೂರಿನಲ್ಲಿರುವ ವಿಚಾರ ತಿಳಿಯಿತು ಎಂಬುದು ಅಲ್ಪಸಂಖ್ಯಾತ ಸಮುದಾಯದ ಪ್ರೌಢಶಾಲಾ ವಿದ್ಯಾರ್ಥಿನಿಯ ಆರೋಪ. ಅವಳ ಮಾತಿನಿಂದ ಸಮುದಾಯದ ಅನೇಕರು ಪುತ್ತೂರು ಸರ್ಕಾರಿ ಆಸ್ಪತ್ರೆ ಬಳಿ ಜಮಾಯಿಸಿದ್ದರು.

ಆದರೆ ಕಳೆದ ಮೂರು ದಿನಗಳಿಂದ ಮನೆಯಲ್ಲಿಯೇ ಇದ್ದ ಬಾಲಕಿ ಮತ್ತೆ ಶಾಲೆಗೆ ಹೋಗಲು ಉದಾಸೀನ ಮಾಡಿದ್ದಾಳೆ. ಶಾಲೆಗೆ ಹೋಗುವ ಬದಲು ಆಕೆಯೇ ನೇರವಾಗಿ ಪುತ್ತೂರಿಗೆ ಬಸ್ ಹತ್ತಿ ಹೋಗಿರುವುದಕ್ಕೆ ಆಕೆಯಲ್ಲಿದ್ದ ಬಸ್ ಟಿಕೆಟ್ ಸಾಕ್ಷಿ. ಮನೆಯಲ್ಲಿ ಗೊತ್ತಾದರೆ ತನಗೆ ಬೈಯುತ್ತಾರೆ ಎಂದು ಬಾಲಕಿ ತಾನೇ ಒಂದು ಹೊಸ ಕಥೆ ಹೆಣೆದಿದ್ದಾಳೆ ಎನ್ನಲಾಗಿದೆ.

ಹಿಂದಿ ಮಾತನಾಡುವ ಇಬ್ಬರು ಅಪರಿಚಿತರು ಓಮ್ನಿ ವ್ಯಾನ್‌ನಲ್ಲಿ ಬಂದು ತನಗೆ ಮತ್ತು ಬರುವ ಔಷಧಿ ನೀಡಿ ಅತ್ಯಾಚಾರ ಮಾಡಿ ಪುತ್ತೂರು ಬಳಿ ಎಸೆದುಹೋಗಿದ್ದಾರೆಂದು ಕಥೆ ಕಟ್ಟಿದ್ದಾಳೆ. ವಿಷಯ ಗೊತ್ತಾಗುತಿದ್ದಂತೆ ಮನೆಯವರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೇ ಸಮುದಾಯದ ಪ್ರಮುಖರು, ರಾಜಕೀಯ ಪ್ರಮುಖರು, ಸಂಘಟನೆಗಳ ಸದಸ್ಯರು ಆಸ್ಪತ್ರೆಗೆ ಧಾವಿಸಿದ್ದರು. ಪೊಲೀಸರನ್ನೂ ಸ್ಥಳಕ್ಕೆ ಕರೆಸಿಕೊಳ್ಳಲಾಯಿತು.

ಆದರೆ, ಎಸ್ಐ ವಾಮನ ಬಾಲಕಿಯನ್ನು ವಿಚಾರಿಸಿದಾಗ ಆಕೆ ಸತ್ಯ ಬಾಯಿಬಿಟ್ಟಿದ್ದಾಳೆ. ಅಲ್ಲಿಗೆ ಆಕೆಯ ನಾಟಕಕ್ಕೆ ತೆರೆಬಿದ್ದಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia