ಪೆಟ್ರೋಲ್ ಬೆಲೆ ಏರಿಕೆ: ಮುಂಬೈನಲ್ಲಿ ಅತ್ಯಧಿಕ

0
120

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಹೊಸದಿಲ್ಲಿ: ಪೆಟ್ರೋಲ್ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಮೂರು ವರ್ಷಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪದವಿ ಸ್ವೀಕರಿಸಿದಂದಿನಿಂದ ಮೊದಲ ಸಲ ಪೆಟ್ರೋಲ್ ಗರಿಷ್ಠ ಬೆಲೆಯನ್ನು ದಾಖಲಿಸಿದೆ. ಮುಂಬೈನಲ್ಲಿ ಸೋಮವಾರ ಲೀಟರ್ ಪೆಟ್ರೋಲ್ ಬೆಲೆ ರೂ.79.41 ದಾಖಲಾಗಿದೆ.

ಆಗಸ್ಟ್ 2014ರಿಂದ ಇದೇ ಅತ್ಯಧಿಕ. ಇಂದು ಲೀಟರ್ ಪೆಟ್ರೋಲ್ ಬೆಲೆ 13 ಪೈಸೆ, ಲೀಟರ್ ಡೀಸೆಲ್ ಬೆಲೆ 25 ಪೈಸೆ ಹೆಚ್ಚಳವಾಗಿದೆ. ಪೆಟ್ರೋಲ್ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರದೆ ಇದ್ದ ಕಾರಣ, ಪೆಟ್ರೋಲ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ.

ಇದರಿಂದಾಗಿ ದೆಹಲಿಯಲ್ಲಿ ರೂ.70.30, ಕೋಲ್ಕತ್ತಾದಲ್ಲಿ ರೂ.73.05, ಚೆನ್ನೈನಲ್ಲಿ ರೂ.72.87ರಷ್ಟಿದೆ. ಡೀಸೆಲ್ ಬೆಲೆ ಸಹ ದೆಹಲಿಯಲ್ಲಿ ರೂ.58.62, ಕೋಲ್ಕತ್ತಾದಲ್ಲಿ ರೂ.61.27, ಮುಂಬೈನಲ್ಲಿ ರೂ.62.26, ಚೆನ್ನೈನಲ್ಲಿ ರೂ.61.73ರಷ್ಟಿದೆ.

ಇಂಧನ ಬೆಲೆಯನ್ನು ನಿತ್ಯ ಪರಿಷ್ಕರಿಸುವ ವಿಧಾನ ಜಾರಿಗೆ ಬಂದಂದಿನಿಂದ ಪೆಟ್ರೋಲ್ ಲೀಟರ್ ರೂ.7ರಷ್ಟು ಹೆಚ್ಚಾಗಿದೆ. ಇದೇ ವಿಧಾನವನ್ನು ಮುಂದುವರೆಸುವುದಾಗಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಇಂಧನ ಬೆಲೆಗಳಲ್ಲಿ ಸ್ವಲ್ಪ ಬದಲಾವಣೆ ಆದರೂ ಅದರ ಪ್ರಯೋಜನ ಕೂಡಲೆ ಗ್ರಾಹಕರಿಗೆ ಸಿಗಲು ನಿತ್ಯ ಇಂಧನ ದರ ಪರಿಷ್ಕರಣೆಯಿಂದ ಸಾಧ್ಯವಾಗುತ್ತಿದೆ. ಜೂ.16ರಿಂದ ಇಂಧನ ಮಾರ್ಕೆಟಿಂಗ್ ಕಂಪೆನಿಗಳು ಈ ವಿಧಾವನ್ನು ಅನುಸರಿಸುತ್ತಿವೆ.
ನಿತ್ಯ ಬೆಳಗ್ಗೆ 6 ಗಂಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆ ಕಾಣಿಸುತ್ತದೆ. ಪೆಟ್ರೋಲಿಯಂ ರಫ್ತು ದೇಶಗಳು (ಓಪೆಕ್) ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 50 ಡಾಲರ್ ಮಾರ್ಕನ್ನು ದಾಟಿದೆ. ಸೆಪ್ಟೆಂಬರ್ 4ರಿಂದ ಈ ಬೆಲೆಗಳು 50.36 ಡಾರಲ್‌ನಷ್ಟಿದ್ದರೆ, ಈಗ ಕಚ್ಚಾತೈಲದ ಬೆಲೆ 52.53 ಡಾಲರ್‌ನಷ್ಟು ನಮೂದಾಗಿದೆ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia