ಸಮಾಜ ಸೇವೆಯಿಂದ ಸ್ವಸ್ಥ ಸಮಾಜವನ್ನು ನಿರ್ಮಾಣ : ಸುರೇಶ್ ಬಟವಾಡಿ

0
172

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಸೆ.11 : ಮನುಷ್ಯನಾಗಿ ಹುಟ್ಟಿದ ಮೇಲೆ ತಾನೂ ಗಳಿದ್ದರಲ್ಲಿ ಅಲ್ಪ ಮೊತ್ತವನ್ನು ಸಮಾಜ ಸೇವೆಗೆ ನೀಡುವುದೆ ನಾವು ಮನುಕುಲಕ್ಕೆ ನೀಡುವ ಬಹು ದೊಡ್ಡ ಕೊಡುಗೆ. ಸಂಘ ಸಂಸ್ಥೆಗಳು ಮಾಡುವ ಸಮಾಜ ಸೇವೆಯಿಂದ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಶಿರೂರು ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ ಹೇಳಿದರು.

ಉಪ್ಪುಂದ ಜೇಸಿ ಸಪ್ತಾಹ ಮೂರನೇ ದಿನದ ಸಭಾ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿದ ಇವರು ವ್ಯಕ್ತಿಯೊಬ್ಬನ ಬದುಕಿನ ಬೇಕಾದ ಅಗತ್ಯತೆಯನ್ನು ಒಮ್ಮೆ ನೀಡುವುದಕ್ಕಿಂತ ಆತನು ಜೀವನಪರ್ಯಂತವೂ ತನ್ನ ಕಾಲ ಮೇಲೆ ತಾನು ನಿಂತು ಬದುಕನ್ನು ನಡೆಸುವಂತಹ ಶಕ್ತಿಯನ್ನು ಕಲ್ಪಿಸುವ ಜೇಸಿಐ ಸಂಸ್ಥೆಯ ಧ್ಯೇಯವು ಎಲ್ಲರಿಗೂ ಮಾದರಿಯಾಗಲಿ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಪ್ರಶಸ್ತಿ ಪುರಸ್ಕøತ ವೆಂಕಟೇಶ್ ರಾವ್ ಹಾಗೂ ವಲಯ 15ದ ವಲಯಾಧ್ಯಕ್ಷ ಜೆಎಫ್‍ಪಿ ಸಂತೋಷ್ ಜಿ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪ್ಪುಂದ ಕೆ.ಆರ್.ಎಸ್.ಎಸ್. ನಿರ್ದೇಶಕ ಬಿ.ಎಸ್ ಸುರೇಶ್ ಶೆಟ್ಟಿ, ಜೇಸಿಐ ವಲ ಸೇವಾಪ್ರತಿನಿಧಿ ಜೇಸಿ.ಮರಿಯಪ್ಪ, ಜೇಸಿ.ಅನಿಲ್, ಜೇಸಿ ಶ್ರೀನಿವಾಸ, ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಕುಶಲ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಜಗದೀಶ್ ದೇವಾಡಿಗ, ಉಪ್ಪುಂದ ಗ್ರಾ.ಪಂ ಮಾಜಿ ಅಧ್ಯಕ್ಷ ಜಗನ್ನಾಥ, ಉಪ್ಪುಂದ ಗ್ರಾ.ಪಂ,ಸದಸ್ಯ ಸಂದೇಶ್ ಭಟ್, ಉಪ್ಪುಂದ ಉದ್ಯಮಿ ರಾಮಚಂದ್ರ ದೇವಾಡಿಗ, ಉಪ್ಪುಂದ ಜೇಸಿಐ ಪೂರ್ವಾಧ್ಯಕ್ಷರಾದ ಸತೀಶ್ ಶೆಟ್ಟಿ, ನರಸಿಂಹ ಹಳಗೇರಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೇಸಿಐ ಅಧ್ಯಕ್ಷ ಮಂಜುನಾಥ ದೇವಾಡಿಗ ಸ್ವಾಗತಿಸಿದರು, 3ನೇ ದಿನದ ಜೇಸಿಐ ಸಪ್ತಾಹ ಸಭಾಪತಿ ಜೇಸಿ ಜಯರಾಜ್ ಖಾರ್ವಿ ವರದಿ ವಾಚಿಸಿ/ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ರಿದಂ ನೃತ್ಯ ತಂಡದಿಂದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಯದುರಾಜ್ ಅವರ ಸುಗಮ ಸಂಗೀತ ನಡೆಯಿತು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia