ಸಮಾಜಸೇವಾ ಕಾರ್ಯದಲ್ಲಿ ಸೇವೆಗೆ ಅತ್ಯಂತ ಹೆಚ್ಚಿನ ಮಹತ್ವ : ಬಿ.ಎಮ್.ಸುಕುಮಾರ್ ಶೆಟ್ಟಿ

0
110

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಸೆ.11 : ಜೇಸಿಐ ಸಂಸ್ಥೆಯು ತರಬೇತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಯುವ ಸಮುದಾಯದ ಪ್ರತಿಭೆಯನ್ನು ಗುರುತಿಸಿ ತರಬೇತಿ ನೀಡುವ ಮೂಲಕ ಅವರ ವ್ಯಕ್ತಿತ್ವವನ್ನು ವಿಕಸನಗೊಳಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಕಾರ್ಯ ಮಾಡುತ್ತಿದೆಯೆಂದು ಕೊಲ್ಲೂರು ಶ್ರೀಕ್ಷೇತ್ರದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಮ್.ಸುಕುಮಾರ್ ಶೆಟ್ಟಿ ಹೇಳಿದ್ದಾರೆ.

ಉಪ್ಪುಂದ ಜೇಸಿ ಸಪ್ತಾಹ ಎರಡನೇ ದಿನದ ಸಭಾ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಸಮಾಜಸೇವಾ ಕಾರ್ಯದಲ್ಲಿ ಸೇವೆಗೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಸಂಸ್ಕøತಿ, ಸೇವೆ ಮತ್ತು ಸಮನ್ವಯದ ಅನುಪಮವಾದ ಆದರ್ಶ ಆಶಯಗಳನ್ನಿಟ್ಟುಕೊಂಡು ಸಮಾಜಮುಖಿ ಕಾರ್ಯಗಳಿಂದ ಜನಜನಿತವಾಗಿರುವ ಉಪ್ಪುಂದ ಜೇಸಿ ಸಂಸ್ಥೆಯ ಕಾರ್ಯಕ್ರಮಗಳು ಅನುಕರಣಿಯವೂ ಆಗಿದ್ದು, ಎಲ್ಲ ವರ್ಗದ ಜನರನ್ನು ಸೆಳೆದಿವೆ. ಅಂತಾರಾಷ್ಟ್ರೀಯ ವ್ಯಾಪ್ತಿಯನ್ನು ಹೊಂದಿರುವ ಇಂತಹ ಸಂಸ್ಥೆಯಲ್ಲಿ ಯುವಜನರ ಪಾಲ್ಗೊಳ್ಳುವಿಕೆ ಹೆಚ್ಚಳವಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಸ್ತೂರಿ ಚಾನೆಲ್ ಗಾಯಕಿ ಶರಧಿ ಪಾಟೀಲ್, ಶರತ್ ಕುಮಾರ್ ಶೆಟ್ಟಿ, ಮುಂಬೈ ಉದ್ಯಮಿ ಜನಾರ್ದನ ದೇವಾಡಿಗ ಹಾಗೂ ನಿವೃತ್ತ ಶಿಕ್ಷಕಿ ಚಿಕ್ಕಮ್ಮ ಟೀಚರ್ ನಾಲ್ವರನ್ನು ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗ, ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ಮೆನೇಜಿಂಗ್ ಟ್ರಸ್ಟಿ ಅಣ್ಣಯ್ಯ ಶೇರಿಗಾರ್, ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಹಿರಿಯಡಕ ಮೋಹನದಾಸ್, ಮುಂಬೈ ಉದ್ಯಮಿ ಜನಾರ್ದನ ದೇವಾಡಿಗ, ಕೊಲ್ಲೂರು ಡಾಟ್ ಕಾಮ್ ಸಂಯೋಜಕಿ ಪ್ರಿಯದರ್ಶಿನಿ ಬೆಸ್ಕೂರು. ಲಯನ್ಸ್ ಕ್ಲಬ್ ಬೈಂದೂರು-ಉಪ್ಪುಂದ ನಿಕಟಪೂರ್ವಾಧ್ಯಕ್ಷ ವೆಂಕಟೇಶ್ ಜಿ, ಬೈಂದೂರು, ವಲಯ ನಾಡದೋಣಿ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಕುಮಾರ್ ಖಾರ್ವಿ, ಚಿತ್ತೂರು-ಮಾರಣಕಟ್ಟೆ ಜೇಸಿ ಅಧ್ಯಕ್ಷ ಅನಿಲ್ ಶೆಟ್ಟಿ, ಉಪ್ಪುಂದ ಜೇಸಿ ಪೂರ್ವಾಧ್ಯಕ್ಷಗಳಾ ಉದಯ್ ಡಿ.ಆರ್, ಮತ್ತು ಗಿರೀಶ್ ಶ್ಯಾನುಭಾಗ್, ಉಪ್ಪುಂದದ ನಿವೃತ್ತ ಶಿಕ್ಷಕಿ ಚಿಕ್ಕಮ್ಮ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.

ಜೇಸಿಐ ಅಧ್ಯಕ್ಷ ಮಂಜುನಾಥ ದೇವಾಡಿಗ ಸ್ವಾಗತಿಸಿದರು, 2ನೇ ದಿನದ ಜೇಸಿಐ ಸಪ್ತಾಹ ಸಭಾಪತಿ ವೇದಾನಾಥ ಶೆಟ್ಟಿ ವರದಿ ವಾಚಿಸಿದರು, ಜೇಸಿ ಕಾರ್ಯದರ್ಶಿ ಗುರುರಾಜ್ ಶೆಟ್ಟಿ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia