ಆಸ್ತಿ ಗಣನೀಯ ಏರಿಕೆ: 7 ಸಂಸದರು, 98 ಶಾಸಕರ ವಿರುದ್ಧ ಐಟಿ ತನಿಖೆ

0
88

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಹೊಸದಿಲ್ಲಿ: ‘ಆಸ್ತಿಯಲ್ಲಿ ಗಣನೀಯ ಏರಿಕೆ’ಯಾದ ಏಳು ಮಂದಿ ಲೋಕಸಭಾ ಸದಸ್ಯರು ಮತ್ತು ವಿವಿಧ ರಾಜ್ಯಗಳ 98 ಮಂದಿ ಶಾಸಕರ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಸೋಮವಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.

ತನಿಖೆಗೆ ಗುರಿಯಾಗಿರುವ ಈ ಸಂಸದರು ಮತ್ತು ಶಾಸಕರ ಹೆಸರುಗಳನ್ನು ಮುಚ್ಚಿದ ಲಕೋಟೆಯಲ್ಲಿರಿಸಿ ಸುಪ್ರೀಂ ಕೋರ್ಟಿಗೆ ಮಂಗಳವಾರ ಸಲ್ಲಿಸುವುದಾಗಿ ಸಿಬಿಡಿಟಿ ಹೇಳಿದೆ. ಈ ಜನಪ್ರತಿನಿಧಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆ ಪ್ರಾಥಮಿಕ ತನಿಖೆ ನಡೆಸಿದ್ದು, ಎಂಪಿಗಳ ಆಸ್ತಿಯಲ್ಲಿ ‘ಭಾರೀ’ ಏರಿಕೆ ಹಾಗೂ ಶಾಸಕರ ಆಸ್ತಿಯಲ್ಲಿ ‘ಗಣನೀಯ’ ಏರಿಕೆ ಪತ್ತೆಯಾಗಿದೆ ಎಂದು ಸಿಬಿಡಿಟಿ ಹೇಳಿದೆ.

26 ಲೋಕಸಭಾ ಸಂಸದರು, 11 ರಾಜ್ಯಸಭೆ ಸಂಸದರು ಮತ್ತು 257 ಶಾಸಕರ ಆಸ್ತಿಗಳಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ ಎಂದು ಲಖನೌ ಮೂಲದ ಎನ್‌ಜಿಓ ‘ಲೋಕ ಪ್ರಹರಿ’ ಆರೋಪಿಸಿದ ಹಿನ್ನೆಲೆಯಲ್ಲಿ ಈ ಪ್ರಾಥಮಿಕ ತನಿಖೆ ನಡೆದಿತ್ತು.

ಇನ್ನೂ ಒಂಬತ್ತು ಲೋಕಸಭೆ ಎಂಪಿಗಳು, 11 ರಾಜ್ಯಸಭೆ ಎಂಪಿಗಳು ಮತ್ತು 42 ಶಾಸಕರ ಸಂಪತ್ತಿನ ಬಗ್ಗೆ ಪ್ರಾಥಮಿಕ ತನಿಖೆ ಪ್ರಗತಿಯಲ್ಲಿದೆ ಎಂದೂ ಸಿಬಿಡಿಟಿ ಮಾಹಿತಿ ನೀಡಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia