ಕಿರಿಕ್ ಪಾರ್ಟಿ ಸ್ಟೈಲ್‍ನಲ್ಲಿ ಕುಂದಾಪುರದಲ್ಲಿ ಪಿ.ಯು ವಿದ್ಯಾರ್ಥಿಗಳಿಂದ ಕಿರಿಕ್

0
155

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಕುಂದಾಪುರ: ಸ್ಯಾಂಡಲ್ ವುಡ್ ಸಕ್ಸಸ್ ಫುಲ್ ಮೂವಿ ಕಿರಿಕ್ ಪಾರ್ಟಿ ಎಲ್ಲರೂ ನೋಡಿದ್ದಾರೆ. ಎಂಜಿನಿಯರ್ ಸ್ಟೂಡೆಂಟ್‍ಗಳು ಮಾಡೋ ಒಂದೊಂದು ಅವಾಂತರ ನಮ್ಮನ್ನು ಬಾಲ್ಯಕ್ಕೆ ಕೊಂಡೊಯ್ಯುತ್ತದೆ. ಈಗ ಕುಂದಾಪುರ ತಾಲೂಕಿನ ಹಾಸ್ಟೆಲ್ ವಿದ್ಯಾರ್ಥಿಗಳು ಶಿಫ್ಟ್ ಮಾಡುವ ವಿಚಾರದಲ್ಲಿ ಕಿರಿಕ್ ಮಾಡಿ ಸುದ್ದಿಯಾಗಿದ್ದಾರೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ಹಾಸ್ಟೆಲ್‍ನಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಹಾಸ್ಟೆಲ್‍ನನ್ನು ಬೇರೆಡೆ ಶಿಫ್ಟ್ ಮಾಡುವ ಆದೇಶ ಬಂದಿತ್ತು. ಬೇರೆಡೆ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡುವುದಾಗಿ ಹೇಳಿದ್ದರು. ಇದಕ್ಕೆ ವಿದ್ಯಾರ್ಥಿಗಳು ರೊಚ್ಚಿಗೆದ್ದು ಕೊಠಡಿಯ ಎಲ್ಲಾ ಫ್ಯಾನುಗಳಲ್ಲಿ ನೇತಾಡಿದ್ದು, ಫ್ಯಾನ್‍ಗಳೆಲ್ಲಾ ಬೆಂಡಾಗಿದೆ. ಗೋಡೆಗಳಲ್ಲಿ ‘ಕಿರಿಕ್ ಬಾಯ್ಸ್’ ಎಂದು ಬರೆದಿದ್ದು ಮಾತ್ರವಲ್ಲದೇ ಕಿರಿಕ್ ಪಾರ್ಟಿಯ ಕಾರಿನ ಚಿತ್ರವನ್ನು ರಚಿಸಿದ್ದಾರೆ.

ಕೊಠಡಿಯ ಟ್ಯೂಬ್‍ಲೈಟ್, ಕುರ್ಚಿಗಳನ್ನು ಧ್ವಂಸಮಾಡಿದ್ದು ಕಬೋರ್ಡ್‍ನಲ್ಲಿದ್ದ ಪುಸ್ತಕ, ಪೇಪರ್‍ಗಳನ್ನೆಲ್ಲಾ ಕೆಡವಿ ಚಲ್ಲಾಪಿಲ್ಲಿ ಮಾಡಿದ್ದಾರೆ. ಮಕ್ಕಳು ಶಿಫ್ಟ್ ಆಗಿ ಬೇರೆ ಕೊಠಡಿಗೆ ಹೋಗುವ ಮುನ್ನ ಇಷ್ಟೆಲ್ಲಾ ಕಿರಿಕ್‍ಗಳನ್ನು ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ವಾರ್ಡನ್ ದೂರು ನೀಡಿದ್ದಾರೆ. ಇದನ್ನು ಹಾಸ್ಟೆಲ್ ಮೇಲಿನ ಪ್ರೀತಿ ಅನ್ನಬೇಕೋ ಅಥವಾ ವಿದ್ಯಾರ್ಥಿಗಳ ಹುಚ್ಚಾಟ ಅನ್ನಬೇಕೋ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

dinetmedia