ಕಿದಿಯೂರು ನಾಗಲಕ್ಷ್ಮೀ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್‍ನಿಂದ ಸಹಾಯಧನ ವಿತರಣೆ

0
132

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ: ಉಡುಪಿಯ ಹೆಸರಾಂತ ವಕೀಲ ಸಾಮಾಜಿಕ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ವಿ.ಆರ್ ಕಿದಿಯೂರ್ ಅವರು ತಮ್ಮ ಜೀವಿತ ಕಾಲದಲ್ಲೆ ಸ್ಥಾಪಿಸಿದ್ದ ಕಿದಿಯೂರು ನಾಗಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಸಮಾಜಮುಖಿಯಾಗಿ ದುಡಿಯುವ ಸಾಮಾಜಿಕ ಸಂಘಟನೆಗಳಿಗೆ, ರೋಗಿಗಳಿಗೆ, ಬಡ ವಿದ್ಯಾರ್ಥಿಗಳಿಗೆ ನಿರಂತರ ಆರ್ಥಿಕ ಸಹಾಯ ಮಾಡುತ್ತಿದ್ದು ಈ ವರ್ಷದ ಸಹಾಯಧನ ವಿತರಣೆ ಮತ್ತು ವಿ.ಆರ್ ಕಿದಿಯೂರು ಸಂಸ್ಮರಣ ಕಾರ್ಯಕ್ರಮ ಟ್ರಸ್ಟ್‍ನ ಕಛೇರಿಯಲ್ಲಿ ಜರಗಿತು.

   

ಟ್ರಸ್ಟ್‍ನ ಕಾರ್ಯದರ್ಶಿ ಪ್ರೋ. ರಾಧಾಕೃಷ್ಣ ರಾವ್ ಪ್ರಸ್ತಾವನೆಯೊಂದಿಗೆ ಕಿದಿಯೂರರ ಉದಾರ ವ್ಯಕ್ತಿತ್ವವನ್ನು ಪರಿಚಯಿಸಿದರು. ಮುಖ್ಯ ಅಭ್ಯಾಗತರಾಗಿ ಶ್ರೀಮತಿ ಮೀನಾಲಕ್ಷಣಿ ಅಡ್ಯಂತಾಯರು ತನ್ನ ಬಾಲ್ಯದಲ್ಲಿ ಅವರು ನೀಡಿದ ವಾತ್ಸಲ್ಯಪೂರಿತ ಪ್ರೀತಿಯನ್ನು ನೆನಪಿಸಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಡಾ.ಎನ್.ಎ ಮಧ್ಯಸ್ಥರು ಮಾತನಾಡಿ ವಿ.ಆರ್ ಕಿದಿಯೂರರು ಸಂಶೋಧನೆಗಳಿಗೆ, ಕಾರ್ಯಾಗಾರ ಹಾಗೂ ಪುಸ್ತಕ ಖರೀದಿ ಮುಂತಾದ ಶೈಕ್ಷಣಿಕ ಚಟುವಟಿಕೆಗಳಿಗೆ ವಿಶೇಷ ರೀತಿಯ ಆರ್ಥಿಕ ನೆರವು ನೀಡುತ್ತಾ ಬಂದವರು. ಮಿತ ಭಾಷಿಯಾದ ಇವರು ತನ್ನ ಸನ್ನಡತೆಯಿಂದ ಎಲ್ಲರಿಂದಲೂ ಗೌರವಾದರಗಳಿಗೆ ಭಾಜನರಾಗಿದ್ದರು ಎಂದು ನುಡಿದರು.

ಸಾಮಾಜಿಕ ಸಂಘಟನೆ, ರೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ರೂ. 5,00,000/- (ಐದು ಲಕ್ಷ) ಆರ್ಥಿಕ ಸಹಾಯ ವಿತರಿಸಲಾಯಿತು.

ಟ್ರಸ್ಟ್‍ನ ಅಧ್ಯಕ್ಷ ಬಿ.ಜಿ. ರಾವ್ ಸ್ವಾಗತಿಸಿದರು. ಖಜಾಂಚಿ ಕೆ. ಕೃಷ್ಣಮೂರ್ತಿ ರಾವ್ ಫಲಾನುಭವಿಗಳ ಪಟ್ಟಿ ವಾಚಿಸಿದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಯು.ಕೆ ರಾಘವೇಂದ್ರ ರಾವ್ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia