ಜೇಸಿ ಸಂಸ್ಥೆ ಮನು ಕುಲದ ಸೇವೆ ಮತ್ತು ಯುವ ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ : ಕೆ.ಗೋಪಾಲ ಪೂಜಾರಿ

0
177

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಸೆ.09 : ಜೇಸಿ ಉಪ್ಪುಂದ 2017ನೇ ಸಾಲಿನ ಜೇಸಿ ಸಪ್ತಾಹ ಉದ್ಘಾಟನಾ ಸಮಾರಂಭ ಉಪ್ಪುಂದದ ಮಾತೃಶ್ರೀ ಸಭಾಭವನದಲ್ಲಿ ಶನಿವಾರ ಸಂಜೆ ನಡೆಯಿತು.

ಬೈಂದೂರು ಶಾಸಕ ಹಾಗೂ ಕ,ರಾ,ರ,ಸಾ,ನಿ ಅಧ್ಯಕ್ಷ ಕೆ,ಗೋಪಾಲ ಪೂಜಾರಿಯವರು ಜೇಸಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಇವರು ವ್ಯಕ್ತಿತ್ವ ವಿಕಸನವೇ ಜೇಸಿ ಸಂಸ್ಥೆಯ ಮೂಲ ಉದ್ದೇಶವಾಗಿದ್ದು, ಮನು ಕುಲದ ಸೇವೆ ಮತ್ತು ಯುವ ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಮಟ್ಟದ ಯುವಕ ಯುವತಿಯರು ಮತ್ತು ಮಕ್ಕಳು ಪ್ರತಿಭೆಯನ್ನು ಸಮಾಜಕ್ಕೆ ತೋರ್ಪಡಿಸಲು ಜೇಸಿಐ ಅವಕಾಶ ಮಾಡಿಕೊಟ್ಟಿದೆ. ಯಾವುದೇ ಸಂಘ ಸಂಸ್ಥೆಗಳು ಸಮಾಜ ಮುಖಿಯಾಗಿದ್ದಾಗ ಮಾತ್ರ ಅದು ನಿರಂತರವಾಗಿ ಬೆಳೆಯುದಕ್ಕೆ ಸಾಧ್ಯವಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿಯವರಿಗೆ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಜೇಸಿ ನರಸಿಂಹ ಹಳಗೇರಿ ಇವರಿಬ್ಬರನ್ನು ಸನ್ಮಾನಿಸಲಾಯಿತು.

ಮುಖ್ಯಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮಹಾಮಂಡಲ (ರಿ.) ಅಧ್ಯಕ್ಷ ರಘುರಾಮ ದೇವಾಡಿಗ ಜೇಸಿ ಸಪ್ತಾಹ ಉದ್ದೇಶಿಸಿ ಮಾತನಾಡಿದ ಇವರು ಜೇಸಿಐ ಸಂಸ್ಥೆ ಹಲವು ಮಂದಿಯ ಸಾಧನೆಗೆ ವೇದಿಕೆ ಕಲ್ಪಿಸಿದ ಹೆಗ್ಗಳಿಕೆ ಹೊಂದಿದೆ. ಯುವ ಸಮುದಾಯ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜೇಸಿಐ ಸಂಸ್ಥೆಯು ಸದಾ ಪ್ರೇರಣೆ ನೀಡುತ್ತದೆ ಎಂದರು.

ಈ ಸಂದರ್ಭದಲ್ಲಿ ಗುರುಮಾಚಿದೇವ ವಿವಿಧೋದ್ದೇಶ ಸ.ಸಂ.ನಿ ಉಡುಪಿ ಇದರ ಅಧ್ಯಕ್ಷ ಎಚ್. ಆನಂದ ಮಡಿವಾಳ, ಖಂಬದಕೋಣೆ ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ಲಾವಣ್ಯ ರಿ. ಬೈಂದೂರು ಇದರ ಅಧ್ಯಕ್ಷ ಗಿರೀಶ್ ಬೈಂದೂರು, ಕುಂದಾಪುರ ಛತ್ರಪತಿ ಯುವ ಸೇನೆಯ ಅಧ್ಯಕ್ಷ ಮಹಾಲಿಂಗ ನಾಯ್ಕ ಗೊರ್ಕಲ್, ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ರಮೇಶ್ ಗಾಣಿಗ ಕೊಲ್ಲೂರು, ಶಿರೂರು ಜೇಸಿಐ ಅಧ್ಯಕ್ಷ ಅರುಣ್ ಕುಮಾರ್ ಶಿರೂರು, ಶಾರದಾ ದೇವಾಡಿಗ ನಾಗೂರು, ಉಪ್ಪುಂದ ಜೇಸಿಐಯ ಸ್ಥಾಪಕಾಧ್ಯಕ್ಷ ದಿವಾಕರ ಶೆಟ್ಟಿ, ಉಪ್ಪುಂದ ಜೇಸಿ ಪೂರ್ವಾಧ್ಯಕ್ಷ ರಾಮಕೃಷ್ಣ ದೇವಾಡಿಗ ಉಪಸ್ಥಿತರಿದ್ದರು.

ಉಪ್ಪುಂದ ಜೇಸಿ ಅಧ್ಯಕ್ಷ ಜೇಸಿ.ಮಂಜುನಾಥ ದೇವಾಡಿಗ ಸ್ವಾಗತಿಸಿ/ಪ್ರಾಸ್ತಾವಿಕ ಮಾತುಗಳನ್ನಾಡಿದರು, ಜೇಸಿ ಪ್ರಶಾಂತ್ ಪೂಜಾರಿ ವಂದಿಸಿದರು, ಜೇಸಿ. ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮವನ್ನು ನಿರ್ವಹಿಸಿದರು.

 ವಾಲ್ತೂರು ರಾಜಾಹುಲಿ ಹುಲಿವೇಷ ತಂಡ ಇವರಿಂದ ಹುಲಿ ವೇಷ-ಟೈಗರ್ ಡಾನ್ಸ್

ಚಿತ್ರ/ವರದಿ : ಎಚ್.ಸುಶಾಂತ್ ಬೈಂದೂರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia