ನಿಧನ : ಪ್ರೌಢಶಾಲಾ ಶಿಕ್ಷಕ ವಿಶ್ವನಾಥ ಶೆಟ್ಟಿ

0
1277

ಬೈಂದೂರು ಸೆ.08 : ನಾವುಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಗಣಿತ ಮತ್ತು ವಿಜ್ಞಾನ ಶಿಕ್ಷಕ ವಿಶ್ವನಾಥ ಶೆಟ್ಟಿ (54) ಶುಕ್ರವಾರ ಹೇರೂರು ಗ್ರಾಮದ ಯಡಕಂಟದ ತಮ್ಮ ಪತ್ನಿಯ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಮೂಲತ ಹಕ್ಲಾಡಿ ಗ್ರಾಮ ಯಳೂರಿನವರಾದ ಅವರು ಕೆಲಕಾಲ ಕುಂದಾಪುರದ ವಿ. ಕೆ. ಆರ್. ಆಚಾರ್ಯ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಸರ್ಕಾರಿ ಸೇವೆಗೆ ಆಯ್ಕೆಯಾದ ಬಳಿಕ ಹಕ್ಲಾಡಿ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸರ್ಕಾರಿ ಪ್ರೌಢಶಾಲೆ, ಉಪ್ಪುಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ದುಡಿದಿದ್ದರು. ಉತ್ತಮ ಬೋಧನೆಯ ಜತೆಗೆ ಶಿಸ್ತು, ಕರ್ತವ್ಯ ನಿಷ್ಠೆಯ ಕಾರಣದಿಂದ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದರು. ಅವರು ಪತ್ನಿ, ವಿವಾಹಿತ ಪುತಿಯನ್ನು ಅಗಲಿದ್ದಾರೆ.

ಶುಕ್ರವಾರ ನಾವುಂದ ಶಾಲೆಯಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಅವರ ಗೌರವಾರ್ಥ ಶಾಲೆಗೆ ರಜೆ ಸಾರಲಾಯಿತು.