ಗೌರಿ ಲಂಕೇಶ ಗೆ ಕಾರವಾರ ಕನ್ನಡ ಸಾಹಿತ್ಯ ಪರಿಷತ್ ನಿಂದ ನುಡಿ ನಮನ 

0
154

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕಾರವಾರ: ಕಾರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಕನ್ನಡ ಭವನದಲ್ಲಿ ಪತ್ರಕರ್ತೆ,ವಿಚಾರವಾದಿ ಗೌರಿ ಲಂಕೇಶ್ ಅವರಿಗೆ ನುಡಿ ನಮನ ಅರ್ಪಿಸಲಾಯಿತು.

   

ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ತಾಲೂಕು ಕಸಾಪ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ ಗೌರಿ ಲಂಕೇಶ್ ದಿಟ್ಟ ಪತ್ರಕರ್ತೆ. ಅವರ ದಾರಿ ಯುವತಿಯರಿಗೆ ಸತ್ಯದ ನಿಷ್ಠುರತೆಯನ್ನು ಕಲಿಸುತ್ತದೆ. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಗೌರಿ ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಮಾಡಿದ ಪ್ರಯತ್ನ, ಆದಿವಾಸಿ ಮತ್ತು ದಲಿತರ ಸಮಸ್ಯೆಗೆ ಮಿಡಿಯುತ್ತಿದ್ದ ರೀತಿ ಅನನ್ಯ ಎಂದರು.

ಕಸಾಪ ಹಿರಿಯ ಸದಸ್ಯ ಎಸ್.ಡಿ.ನಾಯ್ಕ ಮಾತನಾಡಿ ನಮ್ಮದು ಶಾಂತಿ ಮತ್ತು ಅಹಿಂಸೆಯ ಪರಂಪರೆ. ಈ ಹಾದಿಯಲ್ಲಿ ಗೌರಿ ಲಂಕೇಶ್ ನಡೆದಿದ್ದರು. ಸತ್ಯದ ಪ್ರತಿಪಾದನೆ ಅವರ ಜೀವಕ್ಕೆ ಮುಳುವಾಯಿತು ಇದಾಗಬಾರದಿತ್ತು. ಭಿನ್ನಾಭಿಪ್ರಾಯ ಕೊಲೆಗೆ ಕಾರಣವಾಗಬಾರದು ಎಂದರು. ಅಹಿಂಸೆ ಮತ್ತು ಶಾಂತಿಯನ್ನು ಗಾಂಧೀಜಿ ಪ್ರತಿಪಾದಿಸಿದರು. ಹಿಂಸಾವಾದ ಈಗ ಮನುಷ್ಯರನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದು ಎಂ.ಖಲೀಲುಲ್ಲಾ ಹೇಳಿದರು. ಹತ್ಯೆಯಂಥ ಹೀನಕೃತ್ಯ ಖಂಡನೀಯ ಎಂದು ಪ್ರಿನ್ಸಿಪಲ್ ವಿನಾಯಕ ಗಂಗೊಳ್ಳಿ ಹೇಳಿದರು.

ಉಪನ್ಯಾಸಕಿ ಮಹೇಶ್ವರಿ ಮಾತನಾಡಿ ವಿದ್ಯಾರ್ಥಿನಿಯರು ಗೌರಿ ಲಂಕೇಶ್ ರ ದಿಟ್ಟತನ ಬೆಳೆಸಿಕೊಳ್ಳಬೇಕಿದೆ ಎಂದರು. ಪತ್ರಕರ್ತ ಅಚ್ಯುತ್ ಕುಮಾರ್ ಮಾತನಾಡಿ ಸಿದ್ಧಾಂತಗಳ ಭಿನ್ನಾಭಿಪ್ರಾಯ ಕೊಲೆಯಲ್ಲಿ ಅಂತ್ಯವಾಗಬಾರದು. ಚರ್ಚೆಗಳು ನಡೆಯಬೇಕು ಎಂದರು. ಕೊನೆಯಲ್ಲಿ ಒಂದು ನಿಮಿಷ ಮೌನಾಚರಣೆ ಮೂಲಕ ಗೌರಿ ಲಂಕೇಶರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಅರವಿಂದ ನಾಯಕ, ನಜೀರ ಅಹಮ್ಮದ್ ಯು ಶೇಖ್, ಉದಯ್ ಬರ್ಗಿ, ದರ್ಶನ್ ನಾಯ್ಕ , ಉಪನ್ಯಾಸಕ ವಿ.ಎಂ.ನಾಯ್ಕ ,ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia