ಭುವಿ ಬೌಲಿಂಗ್‌ ಮೋಡಿ…

0
258

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಶ್ರೀಲಂಕಾ ತಂಡಕ್ಕೆ ಭುವನೇಶ್ವರ ಕುಮಾರ್ ಮೊದಲ ಆಘಾತ ನೀಡಿದರು. ನಿರೋಷನ್ ಡಿಕ್ವೆಲ್ಲಾ ಹಾಗೂ ದಿಲ್ಶಾನ್ ಮುನವೀರ ಅವರು ಭುವನೇಶ್ವರರ ಎಸೆತದಲ್ಲಿ ವಿಕೆಟ್ ಒಪ್ಪಿಸಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಬಳಕ ತಂಡಕ್ಕೆ ಆಸರೆಯಾಗಿದ್ದ ತಂಡದ ನಾಯಕ ಉಪುಲ್ ತರಂಗ 34 ಎಸೆತಗಳಲ್ಲಿ 48 ರನ್ ಪೇರಿಸಿ, ಬುಮ್ರಾ ಬೌಲಿಂಗ್‌ನಲ್ಲಿ ಧೋನಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ನಂತರ ಮೈದಾನ ಹಂಚಿಕೊಂಡ ಲಾಹೀರು ತೀರುಮನ್ನೆ ಹಾಗೂ ಆಂಜಿಲ್ಯೊ ಮ್ಯಾಥ್ಯೂಸ್‌ ಭಾರತದ ಬೌಲರ್‌ಗಳನ್ನು ಕೆಲಹೊತ್ತು ಕಾಡಿದರು.

ಲಾಹೀರು(67), ಮ್ಯಾಥ್ಯೂಸ್‌‌(55) ರನ್‌ ಗಳಿಸಿ ಲಂಕಾ ಸ್ಕೋರ್‌‌ 200 ರ ಗಡಿ ದಾಟುವಂತೆ ಮಾಡಿದರು. ಉತ್ತಮವಾಗಿ ಆಡುತ್ತಿದ್ದ ಲಾಹೀರು ವಿಕೆಟ್‌ ಭುವನೇಶ್ವರ್‌ ಪಡೆದುಕೊಂಡರೆ, ಮ್ಯಾಥ್ಯೂಸ್‌ ವಿಕೆಟ್‌‌ ಪಡೆದುಕೊಳ್ಳುವಲ್ಲಿ  ಕುಲ್‌ದೀಪ್‌‌ ಯಶಸ್ವಿಯಾದರು. ಇದಾದ ಬಳಿಕ ಸಿರಿವರ್ಧನ್‌(13), ಧನಂಜಯ(4), ಹಸರಂಗ(9), ಪುಸ್ಪಕುಮಾರ್‌‌(8), ಪರ್ನಾಡೋ ಅಜೇಯ (7)ರನ್‌ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಚೇತರಿಸಿಕೊಂಡರೂ ಕೊನೆಯ ಕ್ಷಣದಲ್ಲಿ ಕುಸಿದು.49.4 ಓವರ್‌ನಲ್ಲಿ ತನ್ನೆಲ್ಲಾ ವಿಕೆಟ್‌‌ ಕಳೆದುಕೊಂಡು 238ರನ್‌ ಗಳಿಸಲು ಮಾತ್ರ ಶಕ್ತವಾಯಿತು.

ಭಾರತದ ಪರ ಮಾರಕ ಬೌಲಿಂಗ್‌ ಪ್ರದರ್ಶನ ನೀಡಿದ ಭುವನೇಶ್ವರ್‌ ಕುಮಾರ್‌ 5 ವಿಕೆಟ್‌‌, ಜಸ್‌ಪ್ರೀತ್‌ ಬೂಮ್ರಾ 2, ಯಜುವೇಂದ್ರ ಚಹಾಲಾ ಹಾಗೂ ಕುಲ್‌‌ದೀಪ್‌‌ ಯಾದವ್‌ ತಲಾ 1ವಿಕೆಟ್‌‌ ಪಡೆದುಕೊಂಡರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia