ಒಂದೇ ಪಂದ್ಯದಲ್ಲಿ ಎರಡು ದಾಖಲೆ ಬರೆದ ಧೋನಿ

0
236

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಟೀಂ ಇಂಡಿಯಾ ಹಾಗೂ ಶ್ರೀಲಂಕಾ ನಡುವೆ ನಡೆಯುತ್ತಿರುವ 5 ಪಂದ್ಯಗಳ ಏಕದಿನ ಸರಣಿಯ ಈವರೆಗಿನ 4 ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ನತ್ತ ಹೆಜ್ಜೆ ಹಾಕುತ್ತಿದೆ.

300 ಪಂದ್ಯಗಳ ಸರದಾರರ ಪಟ್ಟಿಗೆ ಸೇರ್ಪಡೆ : ನಾಲ್ಕನೇ ಪಂದ್ಯದಲ್ಲಿ ಮಿಸ್ಟರ್ ಕೂಲ್ ಖ್ಯಾತಿಯ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು 2 ದಾಖಲೆ ಮಾಡಿದ್ದಾರೆ. ಈ ಪಂದ್ಯದ ಆಡುತ್ತಲೇ 300 ನೇ ಏಕದಿನ ಪಂದ್ಯವಾಡಿದ ಆಟಗಾರ ಸಾಲಿಗೆ ಸೇರ್ಪಡೆಯಾದರು. ಈ ಸಾಧನೆಯನ್ನು ಮಾಡಿದ ಭಾರತೀಯ ಆಟಗಾರರಾದ ಯುವರಾಜ್ ಸಿಂಗ್, ಸೌರವ್ ಗಾಂಗೂಲಿ, ರಾಹುಲ್ ದ್ರಾವಿಡ್, ಮೊಹಮ್ಮದ್ ಅಝರುದ್ದೀನ್ ಹಾಗೂ ಸಚಿನ್ ತೆಂಡೂಲ್ಕರ್ ರವರ ಸಾಲಿಗೆ ಸೇರ್ಪಡೆಯಾದರು.

ಅತೀ ಹೆಚ್ಚು ಅಜೇಯ ಆಟ : ಕಳೆದ ಪಂದ್ಯದಲ್ಲಿ ಔಟಾಗದೆ 49 ರನ್ ಗಳಿಸಿದ್ದ ಧೋನಿ, ಹೊಸ ದಾಖಲೆ ಬರೆದರು. ಅತೀ ಹೆಚ್ಚು ಪಂದ್ಯಗಳಲ್ಲಿ ಔಟಾಗದೆ ಉಳಿದ ವಿಶ್ವದ ಆಟಗರ ಎಂಬ ದಾಖಲೆಯು ದ. ಆಫ್ರಿಕಾದ ಶಾನ್ ಪೊಲಾಕ್ (72) ಹಾಗೂ ಶ್ರೀಲಂಕಾದ ಚಾಮಿಂಡ ವಾಸ್ (72) ರವರ ಜಂಟಿ ಹೆಸರಿನಲ್ಲಿದ್ದ ದಾಖಲೆಯನ್ನು ಧೋನಿ (73) ಹಿಂದಿಕ್ಕಿ ಹೊಸ ದಾಖಲೆ ಬರೆದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia