ಗಂಗೊಳ್ಳಿಯ ಪ್ರಸಿದ್ಧ ಕಲೈಕಾರ್ ಮನೆತನದ ಜಿ.ಸಂಜೀವ ಕಲೈಕಾರ್ ನಿಧನ

0
538

ಗಂಗೊಳ್ಳಿ : ಗಂಗೊಳ್ಳಿಯ ಪ್ರಸಿದ್ಧ ಕಲೈಕಾರ್ ಮನೆತನದ ಜಿ.ಸಂಜೀವ ಕಲೈಕಾರ್ (79) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಗಂಗೊಳ್ಳಿಯ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

ಗಂಗೊಳ್ಳಿಯ ಕಲೈಕಾರ್ ಮಠ ಶ್ರೀ ನಗರ ಮಹಾಂಕಾಳಿ ಮತ್ತು ಕಲ್ಲುಕುಟ್ಟಿಗ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಸುಮಾರು 32 ವರ್ಷಗಳ ಕಾಲು ಬಂದರು ಇಲಾಖೆಯಲ್ಲಿ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಗಂಗೊಳ್ಳಿಯ ಕಲೈಕಾರ್ ಮಠ ಶ್ರೀ ನಗರ ಮಹಾಂಕಾಳಿ ಮತ್ತು ಕಲ್ಲುಕುಟ್ಟಿಗ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ದೇವಳವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದ್ದ ಇವರು ಧಾರ್ಮಿಕವಾಗಿ ತಮ್ಮನ್ನು ತೊಡಗಿಸಿಕೊಂಡು ಜನಾನುರಾಗಿದ್ದರು.

ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.