ರಂಗಭೂಮಿ ಹಿರಿಯ ಕಲಾವಿದ ಏಣಗಿ ಬಾಳಪ್ಪ ವಿಧಿವಶ

0
500

ಬೆಳಗಾವಿ: ನಾಟ್ಯ ಭೂಷಣ, ನಾಡೋಜ, ಶತಾಯುಷಿ ಏಣಗಿ ಬಾಳಪ್ಪ (103) ವಿಧಿವಶರಾಗಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಾಳಪ್ಪ ಅವರಿಗೆ ಕಳೆದ ಮೂರು ವರ್ಷಗಳಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಇಂದು ಚಿಕಿತ್ಸೆ ಫಲಿಸದೇ ಶತಾಯುಷಿ ಬಾಳಪ್ಪ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ಬಾಳಪ್ಪ ಮೃತಪಟ್ಟಿದ್ದಾರೆ. ನೂರಾರು ನಾಟಕ, ಚಲನಚಿತ್ರದಲ್ಲಿ ಅಭಿನಯಿಸಿರುವ ಹಿರಿಯ ಕಲಾವಿದ ಏಣಗಿ ಬಾಳಪ್ಪ ಅಗಲಿಕೆಯಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.

ಬಾಳಪ್ಪನನವರು ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಡಾ. ಬಸವರಾಜ ಏಣಗಿ, ಸುಭಾಷ ಏಣಗಿ, ನಟರಾಜ್ ಏಣಗಿ ಬಾಳಪ್ಪ ಅವರ ಮಕ್ಕಳು.