ಕೋಟ : ಗಸ್ತು ಪೊಲೀಸ್ ಮಾಹಿತಿ ಸಭೆ

0
102

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೋಟ: ಪ್ರತಿ ಗ್ರಾಮದಲ್ಲಿಯೂ ಕೂಡ ಕೇವಲ 96ರಷ್ಟು ಶೇಕಡಾ ಗ್ರಾಮಸ್ಥರು ಮಾತ್ರ ಪೊಲೀಸ್‍ರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಉಳಿದ 4 ಶೇಕಡಾ ಜನತೆ ತಮಗೆ ಸಮಸ್ಯೆಯಿದ್ದಲ್ಲಿ ಕೂಡ ಪೊಲೀಸ್ ಠಾಣೆಗೆ ಭೇಟಿ ನೀಡಲು ಭಯ ಪಡುವ ಪರಿಸ್ಥಿತಿ ಈಗಲು ಇದೆ. ಅಪರಾಧ ಮಾಡಿದವರು, ಅಪರಾಧಿಗಳು ಮಾತ್ರ ಪೊಲೀಸ್ ಠಾಣೆಗೆ ತೆರಳಿತ್ತಾರೆ ಹೀಗಾಗಿ ನಾವು ಠಾಣೆಗೆ ತೆರಳಿದರೆ ನಮ್ಮನ್ನು ಕೂಡ ಅಪರಾಧಿಗಳಂತೆ ನೋಡುತ್ತಾರೆ ಎನ್ನುವ ಕೀಳರಿಮೆ ಹೋಗಲಾಡಿಸಬೇಕಾಗಿದೆ ಎಂದು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಕೆ.ಶ್ರೀಕಾಂತ್ ಹೇಳಿದರು.

ಅವರು ಕೋಟ ಕಾರಂತ ಥೀಂ ಪಾರ್ಕ್‍ನಲ್ಲಿ ಕೋಟ ಪೊಲೀಸ್ ಠಾಣೆಯ ವತಿಯಿಂದ ಆಯೋಜಿಸಲಾದ ಕೋಟತಟ್ಟು ಗ್ರಾಮ ವ್ಯಾಪ್ತಿಯ ಗಸ್ತು ಪೊಲೀಸ್ ಮಾಹಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು, ಗ್ರಾಮಕ್ಕೋರ್ವ ಗಸ್ತು ಪೊಲೀಸ್ ಎನ್ನುವ ಈ ನೂತನ ಪೊಲೀಸ್ ವ್ಯವಸ್ಥೆ ಅಪರಾಧ ತಡೆಗಟ್ಟುವಲ್ಲಿ ಸಾಕಷ್ಟು ಸಹಕಾರಿಯಾಗಿದೆ. ಇದನ್ನು ಸಾರ್ವಜನಿಕರು ಬಳಿಸಕೊಳ್ಳ ಅಪರಾಧಗಳನ್ನು ತಡೆಗಟ್ಟುವಲ್ಲಿ ಇಲಾಖೆಗೆ ಸಹಕರಿಸಿ ಎಂದರು. ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಎಚ್.ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೋಟತಟ್ಟು ಪಂಚಾಯಿತಿ ಉಪಾಧ್ಯಕ್ಷ ಲೋಕೇಶ್ ಶೆಟ್ಟಿ, ಕೋಟ ಪೊಲೀಸ್ ಉಪನಿರೀಕ್ಷಕ ರಾಜಗೋಪಾಲ ಉಪಸ್ಥಿತರಿದ್ದರು. ಈ ಸಂದರ್ಭ ಕೋಟತಟ್ಟು ಪಂಚಾಯಿತಿ ವ್ಯಾಪ್ತಿಯ ಗಸ್ತು ಪೊಲೀಸ್ ತಂಡದ ಸದಸ್ಯರು ಉಪಸ್ಥಿತರಿದ್ದರು. ಕೋಟ ಪ್ರಸಾದ್ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು. ಕೋಟ ಪೊಲೀಸ್ ಠಾಣೆಯ ಎಸ್‍ಬಿ ಸತೀಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

ವರದಿ : ರವೀಂದ್ರ ಕೋಟ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia