ಕೋಟ-ಬಾರ್ ಹಾಗೂ ವೈನ್ ಶಾಪ್ ವಿರುದ್ಧ ಸ್ಥಳೀಯ ಯುವಕ ಮಂಡಲದ ವತಿಯಿಂದ ಗ್ರಾಮಪಂಚಾಯತ್‍ಗೆ ಮನವಿ

0
77

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೋಟ: ಬಾರ್ ಹಾಗೂ ವೈನ್ ಶಾಪ್ ಹೆದ್ದಾರಿಯಿಂದ ಅರ್ಧ ಕಿ.ಮೀ ಅಂತರ ಕಾಯ್ದು ಕೊಳ್ಳಬೇಕು ಎಂದು ಇತ್ತೀಚಗೆ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿನ ಹಿನ್ನಲೆಯಲ್ಲಿ ಬಾರ್ ಹಾಗೂ ವೈನ್ ಶಾಪ್ ಮಾಲಿಕರು ಗ್ರಾಮೀಣ ಭಾಗದ ಹತ್ತಾರು ಮನೆಗಳಿರುವ ಪ್ರದೇಶಕ್ಕೆ ಸ್ಥಳಾಂತರಿಸುವ ಭಯದಿಂದ ಆ ಭಾಗದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಹೋರಾಟ ಬಿರುಸಿನಿಂದ ನಡೆದಿದೆ ಈ ದಿಸೆಯಲ್ಲಿ ಗಿಳಿಯಾರು ಮತ್ತು ಮೂಡು ಗಿಳಿಯಾರು ಪರಿಸರದ ವ್ಯಾಪ್ತಿಯಲ್ಲಿ ವೈನ್ ,ಬಾರ್ ನಿರ್ಮಾಣದ ವಿರುದ್ಧ ಆ ಪರಿಸರದ ಯುವಕ ಮಂಡಲವಾದ ಗಿಳಿಯಾರು ಯುವಕ ಮಂಡಲದ ವತಿಯಿಂದ ಕೋಟ ಗ್ರಾಮಪಂಚಾಯತ್‍ಗೆ ಮನವಿ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜ್ಯೋತಿಲಕ್ಷ್ಮಿ, ಅಧ್ಯಕ್ಷರಾದ ವನೀತಾ ಶ್ರೀಧರ ಆಚಾರ್ಯ, ಸದಸ್ಯರಾದ ಚಂದ್ರ ದೇವಾಡಿಗ, ಚಂದ್ರ ಪೂಜಾರಿ, ವಿಶಾಲಾಕ್ಷಿ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ರವೀಂದ್ರ ಕೋಟ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia