ಕೋಟ ವಿವೇಕ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನೆ

0
50

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2017 ಮತ್ತು 2018ನೇ ಸಾಲಿನ ಸಾಹಿತ್ಯ ಸಂಘದ ಉದ್ಘಾಟನೆಯು ಕಾಲೇಜಿನ ಎಂ.ಜಿ.ಎಂ. ಸಭಾಂಗಣದಲ್ಲಿ ನೆರವೇರಿತು.

ಸಾಹಿತ್ಯ ಸಂಘದ ಉದ್ಘಾಟಕರಾಗಿ ಡಾ. ಟಿ.ಎಂ.ಎ.ಪೈ ಶಿಕ್ಷಕ ಶಿಕ್ಷಣ ವಿದ್ಯಾಲಯ, ಉಡುಪಿ ಇದರ ಪ್ರಾಚಾರ್ಯರಾದ ಡಾ. ಮಹಾಬಲೇಶ್ವರ ರಾವ್ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಜೀವನದಲ್ಲಿ ಸಾಹಿತ್ಯ ಒಂದು ಪ್ರಮುಖ ಅಂಗ. ಯಾವುದು ಮನುಷ್ಯನನ್ನು ಸಹೃದಯಿಯಾಗಿ ನಿರ್ಮಿಸುತ್ತದೊ ಅದು ಸಾಹಿತ್ಯ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಸುಪ್ತವಾದ ಪ್ರತಿಭೆಗಳನ್ನು ಕಾಣುವುದಕ್ಕೆ ಮತ್ತು ಹೊರಹೊಮ್ಮುವುದಕ್ಕೆ ಸಾಹಿತ್ಯ ಸಂಘವು ಉತ್ತಮವಾದ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಈ ಸಂಘದ ಸದಸ್ಯರಾಗುವುದರಿಂದ ಅವರಲ್ಲಿ ಇರುವ ಕವಿತೆ, ಲೇಖನ, ರಚನೆ ಇತ್ಯಾದಿ ಪ್ರತಿಭೆಗಳು ಅನಾವರಣಗೊಳ್ಳಲಿ ಎಂದು ತಿಳಿಸಿದರು.

ನಂತರ ರವೀಂದ್ರನಾಥ ಠಾಗೋರರ ಪ್ರಾರ್ಥನೆಯಾದ, ಎಂ.ಎಸ್. ಕಾಮತ್‍ರವರು ಕನ್ನಡಕ್ಕೆ ಅನುವಾದಿಸಿದ ಹಾಗು ವಿವೇಕ ಪದವಿಪೂರ್ವ ಕಾಲೇಜಿನ ಶಾಲಾ ಪ್ರಾರ್ಥನೆಯಾದ “ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೊ” ಈ ಪ್ರಾರ್ಥನೆಯ ಕುರಿತಾಗಿ ಉಪನ್ಯಾಸವನ್ನು ನೀಡಿದರು. ಸ್ವಾತಂತ್ರ್ಯಪೂರ್ವದಲ್ಲಿ ರವೀಂದ್ರನಾಥ ಠಾಗೋರರ, ದೇಶ ಮತ್ತು ದೇಶಭಕ್ತಿಯ ಮೂಲಭಾವವನ್ನು ವಿದ್ಯಾರ್ಥಿಗಳ ಮನಮುಟ್ಟುವಂತೆ ವಿವರಿಸಿದರು.

ಕಾರ್ಯಕ್ರಮದ ಅಭ್ಯಾಗತರಾದ ವಿದಾಸಂಸ್ಥೆಯ ಹಳೆ ವಿದ್ಯಾರ್ಥಿ ರಮಾನಂದ ಭಟ್ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಲ್ಲದೇ ಈ ಪ್ರಾರ್ಥನೆಯ ಕುರಿತಾಗಿ ಸ್ಪರ್ಧೆಯನ್ನು ಏರ್ಪಡಿಸಿ, ವಿಜೇತರಿಗೆ ನಗದು ಬಹುಮಾನವನ್ನು ನೀಡಿ, ಸ್ಪರ್ಧೆಯ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು.

ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ ನಾವಡರು ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕ ಚಂದ್ರಶೇಖರ ಎಚ್.ಎಸ್. ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಸಾಹಿತ್ಯ ಸಂಘದ ಕಾರ್ಯದರ್ಶಿ ಅಶ್ವಿನಿ ಭಟ್ ಧನ್ಯವಾದವನ್ನಿತ್ತರು, ಚಂದನ ಎನ್. ಮೆಂಡನ್ ಕಾರ್ಯಕ್ರಮ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ನಂದಿತ ಡಿ. ಜೋಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕುಮಾರಿ ಪಾವನ, ಪ್ರತೀಕ್ಷಾ, ಮಾಧವಿ,ನೇಹಾ, ವೈಷ್ಣವಿ ಪ್ರಾರ್ಥಿಸಿದರು.

ವರದಿ : ರವೀಂದ್ರ ಕೋಟ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia