ಕಾವೇರಿ ಮದ್ಯದಂಗಡಿ ಪ್ರಾರಂಭಕ್ಕೆ ವಿರೋಧಿಸಿ ಸ್ಥಳೀಯರಿಂದ ಪ್ರತಿಭಟನೆ

0
183

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಬೈಂದೂರು ಜು.10 : ಯಡ್ತರೆ ಪಂಚಾಯತ್ ವ್ಯಾಪ್ತಿಯ ಬಂಕೇಶ್ವರ ಕಾವೇರಿ ಮಾರ್ಗ ಒಂದು ತಯಾರಿದ್ದ ಕಟ್ಟದಲ್ಲಿ ಕಾವೇರಿ ವೈನ್ಸ ಶಾಪ್ ತೆರೆಯಲು ಸಿದ್ಧತೆ ನಡೆದಿದ್ದು, ಜು.11 ರಂದು ಈ ಕಟ್ಟದಲ್ಲಿ ಪ್ರಾರಂಭಗೊಳ್ಳಲಿದೆ. ಇದನ್ನು ವಿರೋಧಿ ಸೋಮವಾರ ಬೆಳಿಗ್ಗೆ ಈ ಕಟ್ಟಡದ ಮುಂಭಾಗದಲ್ಲಿ ಸ್ಥಳೀಯರಿಂದ ಪ್ರತಿಭಟನೆ ನಡೆಸಲಾಯಿತು.

ಸುತ್ತಮುತ್ತಲಿನ ಮನೆ ಇದ್ದು ಹಾಗೂ ಹತ್ತಿರಲ್ಲಿಯೇ ಅಂಗನವಾಡಿ ಕೇಂದ್ರ ಇದ್ದು ಇದರಿಂದ ಸಾಕಷ್ಟು ತೊಂದರೆ ಉಂಟಾಗುತ್ತೆ. ಈ ಮಾರ್ಗದಲ್ಲಿ ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮತ್ತು ಸ್ಥಳೀಯರಿಗೆ ತೊಂದರೆ ಉಂಟಾಗುತ್ತದೆ. ಇಲ್ಲಿ ಮದ್ಯದಂಗಡಿ ಆದರೆ ಸರಿಯಾದ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದೇ ರಸ್ತೆ ಮೇಲೆ ನಿಲ್ಲಿಸಬೇಕು ಇದರಿಂದ ಜನರಿಗೆ ಸಾಕಷ್ಟು ತೊಂದರೆ ಆಗುತ್ತದೆ.

ಸ್ಥಳಕ್ಕೆ ಬೈಂದೂರಿನ ವಿಶೇಷ ತಹಶೀಲ್ದಾರ ಕಿರಣ್ ಗೌರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ  ಕಾವೇರಿ ಮಾರ್ಗದಿಂದ ಬೈಂದೂರು ಪೊಲೀಸ್ ಠಾಣೆಯವರೆಗೂ ಶಾಂತಿ ರೀತಿಯಲ್ಲಿ ಪ್ರತಿಭಟನೆ ನಡೆಸಿ, ಠಾಣಾಧಿಕಾರಿ ಸಂತೋಷ್ ಕಾಯ್ಕಿಕ್ ಅವರಿಗೆ ಸ್ಥಳೀಯರಿಂದ ಮನವಿ ನೀಡಿದರು.

 

ಈ ಸಂದರ್ಭದಲ್ಲಿ ಸ್ಥಳೀಯರಾದ ನಾಗರಾಜ ಗಾಣಿಗ, ಶ್ರೀಧರ ಟೀಚರ್, ರವಿ, ಚಂದ್ರ, ಉಮೇಶ್ ಶೇರುಗಾರ, ಸುಬ್ರಾಯ ಶೇರುಗಾರ, ರಾಮಚಂದ್ರ ಅಡಿಗ, ಗೋಪಾಲ ಆಚಾರ್ಯ,ಮಹಾಬಲ ದೇವಾಡಿಗ, ಕಲಾವತಿ ನಾಗರಾಜ ಗಾಣಿಗ, ಶಂಕರ ದೇವಾಡಿಗ ಹಾಗೂ ಊರಿನ ಗ್ರಾಮಸ್ಥರು ಭಾಗವಸಿದರು.

ಚಿತ್ರ/ವರದಿ : ಎಚ್.ಸುಶಾಂತ್ ಬೈಂದೂರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

dinetmedia