ಬೈಂದೂರು : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ : ಚಾಲಕರಿಬ್ಬರು ಅಪಾಯದಿಂದ ಪಾರು

0
269

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಬೈಂದೂರು ಜು.07 : ಬೈಂದೂರಿನ ನಾಕಟ್ಟೆಯ ಹೊಟೇಲ್ ಸಾಗರ ಎದುರುಗಡೆ ಗುರುವಾರ ತಡ ರಾತ್ರಿ ಸುಮಾರಿಗೆ ಓಕ್ ತುಂಬಿಸಿಕೊಂಡು ಮಂಗಳೂರಿನಿಂದ ಹುಬ್ಬಳಿ ಕಡೆ ಚಲಿಸುತ್ತಿದ್ದ ಲಾರಿ, ಈರುಳ್ಳಿ ತುಂಬಿಸಿಕೊಂಡು ಬೆಳಗಾವಿಯಿಂದ ಉಡುಪಿ ಚಲಿಸುತ್ತಿದ್ದ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಎರಡು ಲಾರಿಯ ಚಾಲಕರು ಅಪಾಯದಿಂದ ಪಾರಾಗಿದ್ದಾರೆ.

ಲಾರಿ ಮುಖಾಮುಖಿ ಸಂಭವಿಸಿದ ಘಟನೆಯಲ್ಲಿ ಸುಮಾರು 2 ರಿಂದ 3 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು, ಸ್ಥಳೀಯರ ಮತ್ತು ಪೊಲೀಸರ ಸಹಕಾರದಿಂದ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಚಿತ್ರ/ವರದಿ : ಎಚ್.ಸುಶಾಂತ್ ಬೈಂದೂರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

dinetmedia