ಗಂಗೂಲಿ ದಾಖಲೆ ಬ್ರೇಕ್ ಮಾಡಿ ಡ್ರೆಸ್ಸಿಂಗ್ ರೂಂನಲ್ಲಿ ಮೌನಕ್ಕೆ ಶರಣಾದ ಧೋನಿ: ವಿಡಿಯೋ ನೋಡಿ

0
129

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಆಂಟಿಗುವಾ: ಭಾರತದ ವಿರುದ್ಧದ ನಾಲ್ಕನೇಯ ಏಕದಿನ ಪಂದ್ಯವನ್ನು ವೆಸ್ಟ್ ಇಂಡೀಸ್ 11 ರನ್ ಗಳಿಂದ ಗೆದ್ದಿದ್ದು, ಈ ಪಂದ್ಯದಲ್ಲಿ ಧೋನಿ ಡ್ರೆಸ್ಸಿಂಗ್ ರೂಂನಲ್ಲಿ ಬೇಸರದಲ್ಲಿ ಕುಳಿತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೌದು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. ಸುಲಭ ಸವಾಲನ್ನು ಬೆನ್ನಟ್ಟಿದ್ದ ಭಾರತ 49.4 ಓವರ್ ಗಳಲ್ಲಿ 178 ರನ್ ಗಳಿಗೆ ಆಲೌಟ್ ಆಯ್ತು.

ಈ ಪಂದ್ಯದಲ್ಲಿ ಧೋನಿ 54 ರನ್ ಹೊಡೆದಿದ್ದರು. ಧೋನಿ ಇಷ್ಟು ರನ್ ಹೊಡೆಯಲು 114 ಎಸೆತಗಳನ್ನು ಎದುರಿಸಿದ್ದರು. ಈ ಇನ್ನಿಂಗ್ಸ್ ನಲ್ಲಿ ಧೋನಿ ಒಂದೇ ಬೌಂಡರಿ ಹೊಡೆದಿದ್ದರು.

ಪಂದ್ಯ ಸೋತ ಬಳಿಕ ಟೀಂ ಇಂಡಿಯಾ ಆಟಗಾರರು ವೆಸ್ಟ್ ಇಂಡೀಸ್ ತಂಡವನ್ನು ಅಭಿನಂದಿಸುತ್ತಿದ್ದರೆ, ಧೋನಿ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತಲ್ಲಿಯೇ ಇದ್ದರು. ಈ ವೇಳೆ ಆಟಗಾರರೊಬ್ಬರು ಕೈ ಕುಲುಕಿದಾಗಲೂ ಧೋನಿ ಮನಸ್ಸಿಲ್ಲದ ಮನಸ್ಸನಿಂದ ಶೇಕ್ ಹ್ಯಾಂಡ್ ಮಾಡಿದ್ದರು.

ಗಂಗೂಲಿ ದಾಖಲೆ ಬ್ರೇಕ್: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಈ ಹಿಂದೆ 2005ರಲ್ಲಿ ಶ್ರೀಲಂಕಾ ವಿರುದ್ಧ  104 ಎಸೆತಗಳಲ್ಲಿ ಅರ್ಧಶತಕ ಹೊಡೆದಿದ್ದರು. ಇಲ್ಲಿಯವರೆಗೆ ಅತಿ ಹೆಚ್ಚು ಎಸೆತಗಳನ್ನು ಎದುರಿಸಿ 50 ರನ್ ಹೊಡೆದ ಟೀಂ ಇಂಡಿಯಾದ ಆಟಗಾರ ಎನ್ನುವ ದಾಖಲೆ ಸೌರವ್ ಗಂಗೂಲಿ ಹೆಸರಿನಲ್ಲಿತ್ತು. ಈಗ ಧೋನಿ 108 ಎಸೆತಗಳಲ್ಲಿ 50 ರನ್ ಹೊಡೆಯುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರೆ ಎರಡನೇ ಪಂದ್ಯವನ್ನು ಭಾರತ 105 ರನ್ ಗಳಿಂದ ಗೆದ್ದುಕೊಂಡಿತ್ತು. ಮೂರನೇ ಪಂದ್ಯವನ್ನು ಭಾರತ 93 ರನ್ ಗಳಿಂದ ಗೆದ್ದುಕೊಂಡಿತ್ತು. ನಾಲ್ಕನೇಯ ಪಂದ್ಯವನ್ನು ವಿಂಡೀಸ್ ಗೆದ್ದುಕೊಂಡಿದ್ದು, ಕೊನೆಯ ಪಂದ್ಯ ಜುಲೈ 6ರಂದು ನಡೆಯಲಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia