ಐಶು ಮತ್ತೊಮ್ಮೆ ತನಗಿಂತ ಚಿಕ್ಕ ವಯಸ್ಸಿನ ನಟನ ಜೊತೆ ರೋಮ್ಯಾನ್ಸ್ ?

0
171

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮುಂಬೈ: ಬಾಲಿವುಡ್‍ನ ನೀಲಿಕಂಗಳ ಸುಂದರಿ ಐಶ್ವರ್ಯ ರೈ ಬಚ್ಚನ್ ಮತ್ತೊಮ್ಮೆ ತಮಗಿಂತ ಚಿಕ್ಕ ವಯಸ್ಸಿನ ನಟನೊಂದಿಗೆ ರೋಮ್ಯಾನ್ಸ್ ಮಾಡಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ. ಐಶ್ವರ್ಯ ರೈ ತಮ್ಮ ಮುಂದಿನ ಸಿನಿಮಾದಲ್ಲಿ ಕಿರಿಯ ನಟನ ಜೊತೆ ಕೆಲ ರೋಮ್ಯಾನ್ಸ್ ಸೀನ್‍ಗಳಲ್ಲಿ ನಟಿಸಲಿದ್ದಾರಂತೆ.

ಐಶ್ವರ್ಯ ರೈ ತಮ್ಮ ಮುಂದಿನ ಚಿತ್ರದಲ್ಲಿ ಅನಿಲ್ ಕಪೂರ್ ಜೊತೆಯಾಗಿ `ಫೆನಿ ಖಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಐಶ್ವರ್ಯಾ ಮತ್ತು ಅನಿಲ್ ಕಪೂರ್ ನಡುವೆ ಯಾವುದೇ ಹಸಿಬಿಸಿ ದೃಶ್ಯಗಳಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಸಿನಿಮಾದ ಒಂದು ಭಾಗದಲ್ಲಿ ಐಶ್ ತನಗಿಂತ ಚಿಕ್ಕ ವಯಸ್ಸಿನ ನಟನೊಂದಿಗೆ ರೊಮ್ಯಾನ್ಸ್ ಮಾಡಲಿದ್ದಾರಂತೆ. ಚಿತ್ರತಂಡ ಮಾತ್ರ ಇದೂವರೆಗೂ ಐಶ್ ಜೊತೆ ಕಾಣಿಸಿಕೊಳ್ಳುವ ಕಿರಿಯ ನಟನ ಹೆಸರನ್ನು ಬಹಿರಂಗ ಮಾಡಿಲ್ಲ.

ಕಳೆದ ವರ್ಷ ತಮಗಿಂತ ಬಹಳ ಚಿಕ್ಕ ವಯಸ್ಸಿನ ನಟ ರಣ್‍ಬೀರ್ ಕಪೂರ್ ಜೊತೆ `ಏ ದಿಲ್ ಹೈ ಮುಷ್ಕಿಲ್’ ಸಿನಿಮಾದಲ್ಲಿ ಐಶ್ವರ್ಯಾ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದರು. ಮುಂದಿನ ತಿಂಗಳು ಅಗಸ್ಟ್‍ನಿಂದ `ಫೆನಿ ಖಾನ್’ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಸಿನಿಮಾದಲ್ಲಿ ಅನಿಲ್ ಕಪೂರ್ ಗಾಯಕರಾಗಿ ಕಾಣಿಸಿಕೊಳ್ಳಲಿದ್ದು, ಐಶ್ ಮಹಿಳಾ ಪರ ನಾಯಕಿಯಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia