ಟೈಲರ್ ಅಂಗಡಿಯಲ್ಲಿತ್ತು 45 ಕೋಟಿ ನಿಷೇಧಿತ ಹಣ!

0
89

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

black-money-holders

ಚೆನ್ನೈ: ಅಮಾನ್ಯೀಕರಣ ಬಳಿಕ ನಗರದಲ್ಲಿ ಮತ್ತೇ ದಾಳಿ ನಡೆದಿದ್ದು, 45 ಕೋಟಿ ಮೊತ್ತದ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವೃತ್ತಿಯಲ್ಲಿ ದರ್ಜಿಯಾಗಿರುವ ದಂಡಪಾಣಿ ಎಂಬಾತನು ಅಂಗಡಿ ಮೇಲೆ ನಿಖರ ಮಾಹಿತಿಯನ್ನಾದರಿಸಿ ಉಪ ಆಯುಕ್ತರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ 1000 ಹಾಗೂ 500 ರೂ ಮುಖಬೆಲೆಯ ಒಟ್ಟು ರೂ 45 ಕೋಟಿ ಮೊತ್ತದ ನೋಟುಗಳನ್ನು ವಶಕ್ಕೆ ಪಡೆದರು. ಗೋಣಿಚೀಲದಲ್ಲಿ ಹಣವನ್ನು ತುಂಬಿ ರೂಮಿನಲ್ಲಿ ಇಡಲಾಗಿತ್ತು.

ರದ್ದಾಗಿರುವ ಈ ನೋಟುಗಳನ್ನು ಚೆನ್ನೈ ಮೂಲದ ಉದ್ಯಮಿಯಿಂದ ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಈಗಾಗಲೇ ನೋಟಿನ ಸಮಗ್ರ ಮಾಹಿತಿಯನ್ನು ಆರ್‍ಬಿಐಗೆ ರವಾನಿಸಲಾಗಿದ್ದು, ಹಣವನ್ನೂ ಸಹ ಆರ್‍ಬಿಐಗೆ ನೀಡಲಾಗಿದೆ. ಮೂಲಗಳ ಪ್ರಕಾರ ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ರವಾನಿಸಲಾಗಿದ್ದು, ಮುಂದಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಗೆ ಮುಂದುವರಿಸಬಹುದು ಎನ್ನಲಾಗಿದೆ.
ಕಳೆದ ವರ್ಷ ನವೆಂಬರ್ 8ರಲ್ಲಿ ನೋಟು ಅಮಾನ್ಯೀಕರಣ ಪ್ರಕರಣೆ ಹೊರಡಿಸಿದೆ ಬೆನ್ನಲ್ಲೇ ಚೆನ್ನೈ ಒಂದರಲ್ಲೇ ಹಲವಾರು ದಾಳಿ ಪ್ರಕರಣಗಳು ನಡೆದಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia