ಎಂಎಸ್ ಧೋನಿಗೆ ಗೆಲುವಿನ ಶ್ರೇಯ ಸಲ್ಲಬೇಕು – ಮನೋಜ್ ತಿವಾರಿ

0
20

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮುಂಬೈ: ಇನಿಂಗ್ಸ್​ನ ಅಂತಿಮ 2 ಓವರ್​ಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ಹಿಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಎಂಎಸ್ ಧೋನಿಗೆ ಗೆಲುವಿನ ಶ್ರೇಯ ಸಲ್ಲಬೇಕು ಎಂದು ರೈಸಿಂಗ್ ಪುಣೆ ಸೂಪರ್​ಜೈಂಟ್ ತಂಡದ ಬ್ಯಾಟ್ಸ್​ಮನ್ ಮನೋಜ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

Dhoni

ಮಂಗಳವಾರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 20 ರನ್​ಗಳಿಂದ ಜಯ ದಾಖಲಿಸಿ ಫೈನಲ್​ಗೇರಿದ ಬಳಿಕ ಮಾತನಾಡಿದ ಅವರು, ಕಡೆಯ 2 ಓವರ್​ಗಳಲ್ಲಿ ಧೋನಿ ತೋರಿದ ಪ್ರದರ್ಶನ ಅದ್ಭುತವಾಗಿತ್ತು ಎಂದು ಶ್ಲಾಘಿಸಿದರು.

‘ಜಸ್​ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ರನ್ ಗಳಿಸು ವುದು ಅಷ್ಟು ಸುಲಭವಲ್ಲ. ಐಪಿಎಲ್​ನಲ್ಲೇ ಅತ್ಯುತ್ತಮ ಬೌಲರ್​ಗಳಲ್ಲಿ ಅವರು ಒಬ್ಬರು. ಬುಮ್ರಾ ಎಸೆದ ಕೊನೇ ಓವರ್​ನಲ್ಲಿ ಧೋನಿ ಭಾಯ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು’ ಎಂದು ತಿವಾರಿ ತಿಳಿಸಿದರು. ಬಿರುಸಿನಿಂದ ಬ್ಯಾಟಿಂಗ್ ಮಾಡಿದರೆ 160 ರನ್ ಪೇರಿಸಬಹುದು ಎಂದು ನಾಯಕ ಸ್ಮಿತ್ ಹಾಗೂ ಕೋಚ್ ಸ್ಟೀಫನ್ ಫ್ಲೆಮಿಂಗ್ ವಿರಾಮದ ವೇಳೆ ನನಗೂ ಹಾಗೂ ರಹಾನೆಗೂ ತಿಳಿಸಿದ್ದರು ಎಂದರು. ಯೋಜನೆಯಂತೆ ಬೌಲರ್​ಗಳು ಪವರ್​ಪ್ಲೇನಲ್ಲಿ 2 ಪ್ರಮುಖ ವಿಕೆಟ್ ಕಬಳಿಸುವ ಮೂಲಕ ಮೇಲುಗೈ ತಂದು ಕೊಟ್ಟರು. ವಾಷಿಂಗ್ಟನ್ ಸುಂದರ್ ಪ್ರದರ್ಶನ ಮೆಚ್ಚು ವಂಥದ್ದು ಎಂದು ತಿವಾರಿ ತಿಳಿಸಿದರು. ಬೆನ್ ಸ್ಟೋಕ್ಸ್ ತಂಡದಲ್ಲಿ ಇಲ್ಲದಿರುವ ಬಗ್ಗೆ ಮಾನಸಿಕವಾಗಿ ಸಿದ್ಧಗೊಂಡಿ ದ್ದೆವು. ತಂಡದ ಗೆಲುವಿನಲ್ಲಿ ಅಲ್ಪ ಕಾಣಿಕೆ ನೀಡಿದ ಬಗ್ಗೆ ಸಂತೋಷವಿದೆ ಎಂದರು.

45 – ಮನೋಜ್ ತಿವಾರಿ ಎದುರಿಸಿದ 45 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ನಿಧಾನ ಗತಿಯಲ್ಲಿ ಅರ್ಧಶತಕ ಗಳಿಸಿದವರ ಪೈಕಿ ಜಂಟಿ ಅಗ್ರಸ್ಥಾನ ಪಡೆದರು. ಇದಕ್ಕೂ ಮೊದಲು ಹೈದರಾಬಾದ್​ನಲ್ಲಿ ವಾರ್ನರ್ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಇಷ್ಟೇ ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

 ಕೊನೇ 2 ಓವರ್​ಗಳು ತಂಡದ ಪಾಲಿಗೆ ದುಬಾರಿಯಾಗಿದ್ದೇ ಸೋಲಿಗೆ ಪ್ರಮುಖ ಕಾರಣ. ಧೋನಿ-ತಿವಾರಿ ಈ ಓವರ್​ಗಳಲ್ಲಿ 41 ರನ್ ದೋಚಿದರು. ಧೋನಿ ಕ್ರೀಸ್​ನಲ್ಲಿರುವ ವೇಳೆ ಇಂಥ ಪವಾಡಗಳು ನಡೆಯುವುದು ಸಾಮಾನ್ಯ. ಮೊದಲ 18 ಓವರ್ ಕಡಿವಾಣ ಹಾಕಿದ್ದೆವು. ಕೇವಲ 2 ಓವರ್​ಗಳಲ್ಲಿ ಪಂದ್ಯದ ಫಲಿತಾಂಶವೇ ಬದಲಾಯಿತು -  ಪಾರ್ಥಿವ್ ಪಟೇಲ್, ಮುಂಬೈ ಇಂಡಿಯನ್ಸ್ ತಂಡದ ಆಟಗಾರ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

dinetmedia